ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಮನೆ ನಿರ್ಮಾಣಕ್ಕೆ ಇಟ್ಟಿಗೆ ಸಾಗಿಸುತ್ತಿದ್ದ ಟ್ರಾಕ್ಟರ್ ಮಗುಚಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ರೇಕಲಗೆರೆ ಲಂಬಾಣಿಹಟ್ಟಿ ಬಳಿ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕು ಯರೇನಹಳ್ಳಿಯಿಂದ ಚಿತ್ರದುರ್ಗ ನಗರಕ್ಕೆ ಕಟ್ಟಡ ನಿರ್ಮಾಣಕ್ಕೆಂದು ಇಟ್ಟಿಗೆ ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಯರೇನಹಳ್ಳಿಯ ಶಶಿಕುಮಾರ್(23) ಹಾಗೂ ಬಸವರಾಜ್ (24) ಎಂದು ಗುರುತಿಸಲಾಗಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post