ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕಿನ ಪರಶುರಾಂಮಪುರ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು-ನಾಲ್ಕು ಬಾರಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದರಿಂದ ಈ ಭಾಗದ ನೂರಾರು ರೋಗಿಗಳಿಗೆ ಅನುಕೂಲವಾಯಿತು ಎಂದು ಪಿಆರ್‌ಪುರ ಜಿಪಂ ಸದಸ್ಯ ಟಿ. ಮುತ್ತುರಾಜು ತಿಳಿಸಿದರು.
ತಾಲೂಕಿನ ಪರಶುರಾಂಪುರದ ಸಮೀಪದ ಓಬಳಾಪುರ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ ಬಳಿ ಸ್ವಾಮಿಯ ಉತ್ಸವದ ಪ್ರಯುಕ್ತ ದೇವಸ್ಥಾನ ಸಮಿತಿ ಹಾಗೂ ಪಿಆರ್‌ಪುರ ಜಿಪಂ ಸದಸ್ಯ ಟಿ ಮುತ್ತುರಾಜು ಅವರ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಪರಶುರಾಮಪುರ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ವೈದ್ಯಕೀಯ ಸೇವೆ ಲಭ್ಯವಾಗದೇ ಅನೇಕ ಮಂದಿ ಆರ್ಥಿಕವಾಗಿ ತೊಂದರೆಗೀಡಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಈ ಶಿಬಿರ ಉಪಯುಕ್ತವಾಗಿದೆ ಎಂದರು.
ಹೃದಯ ರೋಗದ ಮೂರು-ನಾಲ್ಕು ಮಂದಿ, ನರರೋಗ, ಮೂತ್ರಪಿಂಡ, ಮಧುಮೇಹ, ಕೀಳು ಮತ್ತು ಮೂಳೆ, ಕಿವಿ ಮೂಗು ಗಂಟಲು, ಮಕ್ಕಳ ಖಾಯಿಲೆ, ಚರ್ಮರೋಗ, ನೇತ್ರತಜ್ಷರು, ಹಾಗೂ ಮಾನಸಿಕ ರೋಗಗಳ ವೈದ್ಯರ ಬಳಿ ಒಂದು ಸಾವಿರಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಒಳಗಾದರು ನೂರಾರು ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ, ಅಪೋಲೋ, ಬೆಂಗಳೂರಿನ ಪೂರ್ಣಸುದಾ ಕ್ಯಾನ್ಸರ್ ಆಸ್ಪತ್ರೆಯ ವೈದ್ಯರು ಅರೆ ವೈದ್ಯಕೀಯ ಸಿಬ್ಬಂದಿ ತಪಾಸಣೆ ನಡೆಸಿ ವೈದ್ಯಕೀಯ ಸಲಹೆ ನೀಡಿದ್ದಾರೆ. ತೀವ್ರತರ ಕಾಯಿಲೆಗೆ ಒಳಗಾದವರನ್ನು ಉಚಿತ ವಾಹನ, ಊಟ, ವ್ಯವಸ್ಥೆಗೊಳಿಸಿ ಅವರಿಗೆ ಹೆಚ್ಚಿನ ಚಿಕಿತ್ಸೆ, ಹಾಗೂ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯೆ ಗೌರಮ್ಮ ಆರೋಗ್ಯ ತಪಾಸಣೆ ಶಿಬಿರದಲ್ಲಿ ರೋಗಿಗಳಿಗೆ ಉಚಿತ ಔಷಧಿಗಳನ್ನು ವಿತರಿಸಿ ಮಾತನಾಡಿ, ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವುದರಿಂದ ಹಳ್ಳಿಗಾಡಿನ ಕಡುಬಡವರು, ಸಾರ್ವಜನಿಕರಿಗೆ ತಮ್ಮ ಆರೋಗ್ಯ ವೃದ್ಧಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು.
ಜಿಪಂ ಸದಸ್ಯ ಟಿ ಮುತ್ತುರಾಜು ಲಕ್ಷಿಮಾತನಾಡಿ, ಪಿಆರ್‌ಪುರ ಜಿಪಂ ವ್ಯಾಪ್ತಿಯ ನೂರಾರು ಹಳ್ಳಿಗಳ ರೋಗಿಗಳಿಗೆ ನರಸಿಂಹಸ್ವಾಮಿ ದೇವಸ್ಥಾನದ ಸಮಿತಿಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಸಾವಿರಾರು ರೋಗಿಗಳಿಗೆ ಉಪಯೋಗವಾಗಿದೆ. ತಪಾಸಣೆಗೆ ಒಳಗಾದವರಲ್ಲಿ ೨೦೦ ಕ್ಕೂ ಅಧಿಕ ಮಂದಿ ಹೆಚ್ಚಿನ ಚಿಕಿತ್ಸೆಗೆ ತೆರಳಲು ಅಗತ್ಯ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುತ್ತಿರುವುದು ಒಳ್ಳೆಯದು ಎಂದರು.
ಕ್ಯಾದಿಗುಂಟೆ ಎಣ್ಣೆಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಗೇಟ್ ದೇವರಾಜು ಮಾತನಾಡಿ, ಆರೋಗ್ಯ ತಪಾಸಣಾ ಶಿಬಿರದಲ್ಲಿ 1800ಕ್ಕೂ ಅಧಿಕ ರೋಗಿಗಳು ತಪಾಸಣೆಗೆ ಒಳಗಾದರು, 150ಕ್ಕೂ ಹೆಚ್ಚು ರೋಗಿಗಳು ಹೆಚ್ಚಿನ ಚಿಕಿತ್ಸೆಗೆ ಆಯ್ಕೆಯಾದ ಹಿನ್ನೆಲೆ ಮಾ.1ರಂದು ಉಚಿತ ವಾಹನದಲ್ಲಿ ಆ ಎಲ್ಲಾ 150 ಮಂದಿಯನ್ನು ವಾಹನಗಳಲ್ಲಿ ಕರೆದೊಯ್ಯಲಾಗುವುದು ಎಂದರು.
ಲಕ್ಷಿನರಸಿಂಹಸ್ವಾಮಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಗೌರಮ್ಮ, ಮುಖಂಡರಾದ ಕರಣ್ರಾಜು, ಮೌಲ್ಯಮುತ್ತುರಾಜು, ಗ್ರಾಪಂ ಸದಸ್ಯರಾದ ಶೃತಿ ಶಿವಕುಮಾರ, ನರಸಿಂಹಮೂರ್ತಿ, ಗ್ರಾಮದ ಮುಖಂಡರಾದ ಬಿ ಟಿಜಯಣ್ಣ, ಶಿವಾನಂದಪ್ಪ, ಶಿವರುದ್ರೇಗೌಡ, ಶ್ರೀನಿವಾಸ, ಶಿವಶಂಕರ, ಹನುಮಂತರಾಯ, ಓ ಬೈಲಪ್ಪ, ಚಿಕ್ಕೇಗೌಡ್ರು, ಶಶಿಧರ, ಕಂಚಿನಾಯಕ, ಎಸ್ ಎಂ ನಂಜುಂಡಪ್ಪ, ಬಿ ಎಲ್ ಶಶಿಧರ, ಶಿವಶಂಕರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜಿ ಗೋವಿಂದಪ್ಪ, ನರಸಿಂಹಪ್ಪ, ಪ್ರಮೋದ, ಮಲ್ಲಿಕಾರ್ಜುನಪ್ಪ, ಎಚ್ ನಾಗರಾಜು, ಜಿ ಗುರುಸ್ವಾಮಿ, ಟಿ ದಯಾನಂದಪ್ಪ, ಜಿ ಶಿವಕುಮಾರ, ಬಾಲರಾಜು ಗ್ರಾಮಸ್ಥರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post