ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಓರ್ವ ಭ್ರಮಾಲೋಕದ ಬಾದ್ ಷಾ ಎಂದು ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ.
ಹಿರಿಯೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಭ್ರಮಾಲೋಕ ಬಾದ್ ಷಾ ಆಗಿದ್ದು, ಇವರನ್ನು ಜನರೇ ತಿರಸ್ಕರಿಸಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಈಗಾಗಲೇ ಗೂಳಿ ಕಾಳಗ ಶುರುವಾಗಿದೆ ಎಂದರು.
ಇವರುಗಳು ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಹಾಗೂ ಆರ್’ಎಸ್’ಎಸ್ ಸಂಘಟನೆಯನ್ನು ಟೀಕಿಸುತ್ತಾರೆ. ಆದರೆ, ಇವರುಗಳೇ ನೈತಿಕ ಹಾಗೂ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಇಂತಹವರನ್ನು ಜನರೇ ತಿರಸ್ಕರಿಸಬೇಕು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















