ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕಿನ ವಿವಿಧ ಮರಳು ಬ್ಲಾಕ್‌ಗಳಲ್ಲಿ ಗುತ್ತಿಗೆದಾರರು ನಿಯಮ ಮೀರಿ ದೊಡ್ಡ-ದೊಡ್ಡ ಗುಂಡಿಗಳನ್ನು ತೋಡುತ್ತಿದ್ದಾರೆ, ಹಾಗೂ ಮಧ್ಯರಾತ್ರಿಯಲ್ಲಿ ಪರವಾನಿಗೆ ಪಡೆಯದೆ ಅಕ್ರಮವಾಗಿ ಮರಳು ಸಾಗಟ ಮಾಡುತ್ತಿದ್ದರೆ ಎಂದು ಕಲಮರಹಳ್ಳಿ, ಗೊರ್ಲತ್ತು, ಬೆಳಗೆರೆ ಸುತ್ತಲ್ಲಿನ ಗ್ರಾಮಸ್ಥರು ಮರಳು ದಂಡೆಯಲ್ಲಿ ಕೂತು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸ್ಥಳಕ್ಕೆ ಶಾಸಕ ಟಿ.ರಘುಮೂರ್ತಿ ಆಗಮಿಸಿ, ನಿಮ್ಮ ಸಮಸ್ಯೆಗಳಿಗೆ ಸದಾ ನಾವಿದ್ದೆವೆ. ಕಾನೂನು ಬಾಹಿರವಾಗಿ ಮರಳು ತುಂಬಲು ಸಹಕಾರ ನೀಡಿದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ನಾನು ನಿಮ್ಮೊಂದಿಗೆ ಪ್ರತಿಭಟನೆಗೆ ಕೂರುತ್ತೇನೆ. ಸರಕಾದ ನಿಯಮಗಳನ್ನು ಪಾಲಿಸದೆ ಅಕ್ರಮವಾಗಿ ಮರಳನ್ನು ಬೇರೆಡೆಗೆ ವರ್ಗಾಯಿಸುವುದು ಸರಿಯಲ್ಲ. ಸರಕಾರ ನಿಯಮವಳಿಗಳನ್ನು ಅನುಸರಿಸಿ ಮರಳು ತೆಗೆಯಬೇಕು. ನಿಯಮಗಳನ್ನು ಪಾಲಿಸದೆ ಇರುವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಷ್ಟಪಡಿಸಬೇಕು. ಬ್ಲಾಕ್‌ಗಳಲ್ಲಿ ಸರಕಾರ ನಿಯಮಾನುಸರಾಗಿ ಸಿಸಿ ಟಿವಿ, ಮರಳು ಪರವಾನಿಗೆ, ನೊಂದಣಿಯಾದ ವಾಹನ ಎಲ್ಲವನ್ನು ಪರಿಶೀಸಲಾಗುತ್ತದೆ ಎಂದರು.
ಸ್ಥಳೀಯರ ಆರೋಪ:
ಸರಕಾರ ನೀಡಿರುವ ಮಾರ್ಗಸೂಚಿಗಳನ್ನು ಗುತ್ತಿಗೆದಾರರು ಪಾಲಿಸಿಲ್ಲ. ಮರಳು ತೆಗೆಯಲು ಸರಕಾರದಿಂದ ನೀಡಿದ ಆಳಕ್ಕಿಂತ ಹೆಚ್ಚಿನದಾಗಿ ತೆಗೆದು. ದೊಡ್ಡ-ದೊಡ್ಡ ಕಂದಕಗಳನ್ನು ಮಾಡಿದ್ದಾರೆ. ಇದ್ದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ವೇದಾವತಿ ನದಿ ದಡದಲ್ಲಿರುವ ಹಲವು ಗ್ರಾಮಗಳ ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಕಡಿಮೆಯಾಗಿ ನೀರು ಸಿಗದಂತಾಗಿದೆ. ಕೊರೋನಾ ಸಂಧರ್ಭದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಹೋಗುವ ಲಾರಿಗಳನ್ನು ನಾವೇ ತಡೆ ಹಿಡಿದು ಖಂಡಿಸಿದ್ದೇವೆ. ಆದರೆ, ಅಧಿಕಾರಿಗಳು ಈ ಕುರಿತು ಮೌನವಹಿಸಿದ್ದಾರೆ. ಆಳ ಮೀರಿ ಮರಳು ತೋಡುವುದರಿಂದ ಈ ಭಾಗದ ರೈತರಿಗೆ ಮಾರಕವಾಗಿದೆ ಎಂದು ಆರೋಪಿಸಿದರು.
ವೇದಾವತಿ ನದಿ ದಡದಲ್ಲಿ ಪ್ರತಿಭಟನೆ: ಶಾಸಕ ರಘುಮೂರ್ತಿ
ಗರ್‍ಲತ್ತು, ಕಲಮರಹಳ್ಳಿಯಲ್ಲಿ ಅಧಿಕಾರಿಗಳು ಗುರುತಿಸಿರುವ ಮೂರು ಬ್ಲಾಕ್‌ಗಳಲ್ಲಿ ಸರಕಾರದ ನಿಯಮಾವಳಿಗಳ ಪ್ರಕಾರ ಮರಳು ತುಂಬುವುದಕ್ಕೆ ಯಾವುದೇ ಅಬ್ಯಾಂತರ ಇಲ್ಲ. ಆದರೆ ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿ ವೇದಾವತಿ ನದಿ ಪಾತ್ರದಲ್ಲಿ ದೊಡ್ಡ-ದೊಡ್ಡ ಕಂದಗಳನ್ನು ಮಾಡಿ ಅಂತರ್ಜಲ ಕುಸಿತಕ್ಕೆ ಕಾರಣರಾಗಿದ್ದಾರೆ. ಹಾಗೂ ರಾತ್ರಿ ವೇಳೆಯಲ್ಲಿ ಪರವಾನಿಗೆ ಪಡೆಯದೆ ಲಾರಿಗಳಲ್ಲಿ ಮರಳು ಸಾಗಟ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಆದ್ದರಿಂದ ಈ ಕೂಡಲೇ ಅಧಿಕಾರಿಗಳು ಅಕ್ರಮ ಮರಳು ಸಾಗಾಣೆಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ತಾನು ಕೂಡ ನದಿ ದಡದಲ್ಲೆ ಕೂತು ಪ್ರತಿಭಟನೆ ಮಾಡುತ್ತೇನೆ ಎಂದು ಶಾಸಕ ರಘುಮೂರ್ತಿ ಹೇಳಿದ್ದಾರೆ.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಹೇಳಿಕೆ:
ತಾಲೂಕಿನ ಗೊರಲತ್ತು ವ್ಯಾಪ್ತಿಯಲ್ಲಿ ಒಂದು ಹಾಗೂ ಕಲಮರಹಳ್ಳಿಯಲ್ಲಿ ಎರಡು ಬ್ಲಾಕ್‌ಗಳನ್ನು ಗೊತ್ತುಪಡಿಸಿ ನಿಯಮಾನುಸರವಾಗಿ 2017ರಿಂದ ಮುಂದಿನ ಐದು ವರ್ಷಗಳವರೆಗೆ ಮರಳು ತುಂಬಲು ಆದೇಶ ನೀಡಿತ್ತು. ಆದರೆ ಗುತ್ತಿಗೆ ಪಡೆದವರು ಕಾನೂನು ಪಾಲಿಸದೆ ಗುಂಡಿಗಳನ್ನು ತೋಡಿರುವ ಕಾರಣ ತಾತ್ಕಲಿಕವಾಗಿ ಮರಳು ತೆಗೆಯುವುದನ್ನು ಸ್ಥಗಿತಗೊಳಿಸಲಾಗಿದೆ.
ರದಿ: ಸುರೇಶ್ ಬೆಳಗೆರೆವ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post