ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸದುರ್ಗ: ಇಂದು ಮುಂಜಾನೆ ಅಸ್ತಂಗತರಾದ ಬೆಲಗೂರು ಆಂಜನೇಯ ದೇವಾಲಯದ ಅವಧೂತ ಶ್ರೀ ಬಿಂದು ಮಾಧವ ಶರ್ಮಾ ಸದ್ಗುರುಗಳ ಅಂತ್ಯ ಸಂಸ್ಕಾರ ಇಂದು ರಾತ್ರಿ ನಡೆಯಿತು.
ಅತೀತ ಲೋಕದ ಮಹಾಯಾತ್ರಿಕ.. ನಡೆದಾಡುವ ಹನುಮ … ಮಾತನಾಡುವ ಮಾರುತಿ ಎಂದೇ ಖ್ಯಾತರಾಗಿದ್ದ ಅವಧೂತ ಸದ್ಗುರು ಶ್ರೀ ಬಿಂದು ಮಾಧವ ಶರ್ಮ ಸ್ವಾಮಿಗಳು (75) ವಿದೇಹ ಮುಕ್ತಿ ಹೊಂದಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಗುರುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ವೆಂಟಿಲೆಟರ್ ಗೆ ಶಿಫ್ಟ್ ಮಾಡಲಾಗಿತ್ತು.
ಆದರೆ ಇಂದು ಬೆಳಗ್ಗೆ 10:30 ಸುಮಾರಿನಲ್ಲಿ ಗುರುಗಳು ಇಹಲೋಕ ತ್ಯಜಿಸಿದ್ದು ಇದೀಗ ಶ್ರೀಗಳ ಪಾರ್ಥಿವ ಶರೀರವನ್ನು ಸಂಜೆ ವೇಳೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೆಲಗೂರಿಗೆ ತರಲಾಯಿತು.
ಇಂದು ಸಂಜೆಯೇ ಬೆಲಗೂರಿನ ತೋಟದಲ್ಲಿ ಪೂಜ್ಯರ ಅಂತಿಮ ಸಂಸ್ಕಾರ ಬೆಲಗೂರಿನ ತೋಟದಲ್ಲಿ ಸಂಜೆ ವೇಳೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಈ ಮೂಲಕ ಗುರುಗಳು ಹನುಮನಲ್ಲಿ ಲೀನರಾಗಿದ್ದಾರೆ.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post