ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರದಲ್ಲಿ ಮೊಬೈಲ್ ಕಳ್ಳತನ ಮಾಡಿ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಸುಮಾರು 15 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಕೆ.ವಿ. ಶ್ರೀಧರ್ ತಿಳಿಸಿದರು.
ನಗರದಲ್ಲಿ ಮೊಬೈಲ್ ಕಳ್ಳತನವಾಗುತ್ತಿದ್ದ ಪ್ರಕರಣಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ್ ಅರ್ಜುನ್ ಲಿಂಗಾರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಿ ಸರಿಯಾದ್ದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿ ಮೊಬೈಲ್ ಕಳ್ಳನನ್ನು ಹಿಡಿಯಲಾಗಿದೆ.
ಯಾರಾದರೂ ಕಡಿಮೆ ಹಣಕ್ಕೆ ಮೊಬೈಲ್ ಮಾರಾಟ ಮಾಡಲು ಬಂದಾಗ ಸಾರ್ವಜನಿಕರು ತೆಗೆದುಕೊಳ್ಳಬಾರದು. ಮೊಬೈಲ್ ಕಳ್ಳರು ಕದ್ದ ಮೊಬೈಲನ್ನೂ ನಗರದಲ್ಲಿ ಕಳ್ಳತನ ಮಾಡಿ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಾರೆ. ಆದುದರಿಂದ ಯಾರೂ ಸಹ ಕಡಿಮೆ ಹಣಕ್ಕೆ ಮಾಡುವ ಮೊಬೈಲ್ ಖರೀದಿಸಬೇಡಿ. ಕದ್ದ ಮೊಬೈಲ್ ಖರೀದಿಸುವುದರಿಂದ ತೊಂದರೆಯಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದಿರಿ. ಇನ್ನು, ನಗರದಲ್ಲಿ ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲಾಗಿದೆ ನಮ್ಮ ತಂಡ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.
ಪಿಎಸ್‌ಐ ಮಂಜುನಾಥ ಅರ್ಜುನ್ ಲಿಂಗಾರೆಡ್ಡಿ ಮಾತನಾಡಿ, ನಗರದಲ್ಲಿ ಬೆಲೆ ಬಾಳುವ ಮೊಬೈಲ್ ಕಳ್ಳತನದ ಪ್ರಕರಣಗಳಾಗಿದ್ದವು. ತಂಡದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸಿ ಬೆಲೆ ಬಾಳುವ ಮೊಬೈಲ್ ಕದಿಯುತ್ತಿದ್ದ ನವೀನ್(22) ಕಾಟಪ್ಪನಹಟ್ಟಿ ಇವನಿಂದ ಸುಮಾರು 57.000 ಬೆಲೆ ಬಾಳುವ ಮೊಬೈಲ್ ಪೋನ್’ಗಳನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿಕೊಳ್ಳಲಾಗಿದೆ ಎಂದರು.
ಪಿಎಸ್‌ಐ ರಾಘವೇಂದ್ರ ಎಸ್‌ಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಶಿವಾನಂದ, ಪುರುಷೋತ್ತಮ್, ಅಣ್ಣಪ್ಪನಾಯ್ಕ್, ಶಂಕರಮೂರ್ತಿ, ಮಹಂತೇಶ್, ಏಕಾಂತರೆಡ್ಡಿ, ತಿಪ್ಪಬೋವಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post