ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸದುರ್ಗ: ಬೆಲಗೂರು ಶ್ರೀ ವೀರಪ್ರತಾಪ ಆಂಜನೇಯ ದೇವಾಲಯದ ಅವಧೂತ ಶ್ರೀ ಬಿಂದು ಮಾಧವ ಸದ್ಗುರುಗಳು ಅವರು ಇಂದು ಮುಂಜಾನೆ ಅಸ್ತಂಗತರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಗುರುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮುಂಜಾನೆ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರು ಆಂಜನೇಯನ ಪಾದದಲ್ಲಿ ಲೀನವಾಗಿದ್ದಾರೆ.
ಸದ್ಗುರುಗಳ ಆಪ್ತವಲಯದ ಮಾಹಿತಿಯಂತೆ ಗುರುಗಳ ಪಾರ್ಥಿವ ಶರೀರವನ್ನು ಸಂಜೆ 4.30ರ ವೇಳೆಗೆ ಬೆಲಗೂರಿಗೆ ತರಲಾಗುತ್ತದೆ. ನಾಳೆ ಬೆಲಗೂರಿನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post