ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಸರ್ಕಾರ ತಪಿಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂಗರ್ಭ ಇಲಾಖೆ ಇಂಜಿನಿಯರ್ ಲಿಂಗರಾಜು ಅವರನ್ನು ಅಮಾನತ್ತು ಪಡಿಸಿದ ಕ್ರಮವನ್ನು ಸ್ವಾಗತಿಸುವುದಾಗಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಇಲ್ಲಿನ ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಇತ್ತೀಚೆಗೆ ಕೊರ್‍ಲತ್ತು, ಕಲಮರಹಳ್ಳಿ ಮರಳು ದಾಸ್ತಾನು ಕೇಂದ್ರಗಳಿಗೆ ಭೇಟಿ ನೀಡಿ ಗ್ರಾಮಸ್ಥರು ಮತ್ತು ರೈತರು ಜಾಗೃತರಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಅಲ್ಲಿ ಮರಳು ಸಾಗಾಣಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಜಿಲ್ಲಾ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಲಿದ್ದು, ಅಕ್ರಮ ಮರಳು ಸಾಗಾಣಿಕೆಗೆ ತಾವು ಯಾವ ಹಂತದಲ್ಲೂ ಅವಕಾಶ ನೀಡದೇ ಇರಲು ದೃಢ ನಿರ್ಧಾರ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರಕ್ಕೆ ಮರಳು ಸಾಗಾಣಿಕೆಯಿಂದ ಹೆಚ್ಚಿನ ಲಾಭವಿದ್ದರೂ ರೈತರ ಹಿತದೃಷ್ಠಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ನಿಯಮಗಳ ಪ್ರಕಾರ ಕೇವಲ 4 ಅಡಿ ಮಾತ್ರ ಮರಳು ನದಿಯಿಂದ ತೆಗೆದು ಸಾಗಾಣಿಕೆ ಮಾಡಿದಲ್ಲಿ ಈ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಅಕ್ರಮ ಮರಳು ತೆಗೆದರೆ ಅಧಿಕಾರಿಗಳು ಕ್ರಮ ಕೈಗೊಳತ್ತಾರೆ. ಹಾಗೆ ಮುಂದುವರೆದು ಮರಳು ಗಣಿಗಾರಿಕೆ ಮಾಡಿದರೆ ರೈತರ ಜೊತೆ ನಾವು ಸಹ ವೇದಾವತಿ ನದಿ ದಡದಲ್ಲಿ ಕುಳಿತುಕೊಂಡು ಧರಣಿ ಮಾಡಲಾಗುವುದು ಎಂದರು.
ಸರ್ಕಾರ ನಮ್ಮ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದು, ಗೋರ್‍ಲತ್ತು ಸಮೀಪ ಸುಮಾರು 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ಗೋಸಿ ಕೆರೆಯಲ್ಲಿ 30 ಕೊಟಿರೂ. ಹಾಗೂ ಮೋದೂರು ಸಮೀಪ 7 ಲಕ್ಷರೂ ವೆಚ್ಚದ ಬ್ಯಾರೇಜ್ ಸ್ಥಗಿತಗೊಂಡಿದೆ. ನಗರದಲ್ಲಿ ನಗರಸಭೆ ಕಾರ್ಯಾಲಯ, ಖಾಸಗಿ ಬಸ್ ನಿಲ್ದಾಣ ಹಾಗೂ ಹಲವಾರು ಕಾಮಗಾರಿಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ಕಾಮಗಾರಿಗಳು ಸ್ಥಗಿತಗೊಂಡು ಅಭಿವೃದ್ದಿ ಕಾರ್ಯಕ್ಕೆ ಕುಂಠಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮಿ, ಉಪಾಧ್ಯಕ್ಷ ಜೈತುಂನ್ಬಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ, ಸದಸ್ಯರಾದ ಮಂಜುಳ ಆರ್. ಪ್ರಸನ್ನಕುಮಾರ್, ವೈ. ಪ್ರಕಾಶ, ಪೌರಯುಕ್ತ ಪಾಲಯ್ಯ ಇದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post