ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವಲಸಿಗರ ತಾಣವೆಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಈ ಹಿಂದಿನ ಎಲ್ಲ ಚುನಾವಣೆ ಫಲಿತಾಂಶ ಗಮನಿಸಿದರೆ, ಬಹುತೇಕರು ವಲಸಿಗರೇ ಇಲ್ಲಿ ವಿಜಯಶಾಲಿ ಆಗಿದ್ದಾರೆ.
ಅದರಲ್ಲೂ ಅಚ್ಚರಿಯೆಂಬಂತೆ ಕೇವಲ 15-20 ದಿನಗಳಲ್ಲಿಯೇ ಕ್ಷೇತ್ರಕ್ಕೆ ಬಂದು ಎಂಪಿ ಆದವರ ಸಂಖ್ಯೆ ಹೆಚ್ಚಿದೆ. ನಟ ಶಶಿಕುಮಾರ್, ಪಿ.ಕೋದಂಡರಾಮಯ್ಯ,.ಬಿ.ಎನ್.ಚಂದ್ರಪ್ಪ, ಜನಾರ್ದನಸ್ವಾಮಿ ಸೇರಿದಂತೆ ಇವರೆಲ್ಲರೂ ಕ್ಷೇತ್ರಕ್ಕೆ ದಿಢೀರನೆ ಟಿಕೆಟ್ ತಂದು ಗೆಲುವು ಕಂಡವರು.
ಈ ಬಾರಿಯೂ ಸ್ಥಳೀಯ ವ್ಯಕ್ತಿಗೆ ಟಿಕೆಟ್ ಕೊಡಬೇಕೆಂಬ ಕೂಗು ಜೋರಾಗಿದ್ದರೂ ದಿಢೀರನೆ ಟಿಕೆಟ್ ಗಿಟ್ಟಿಸಿಕೊಂಡು ಕ್ಷೇತ್ರಕ್ಕೆ ಕಾಲಿಟ್ಟ ಆನೆಕಲ್ ಕ್ಷೇತ್ರದ .ಎ.ನಾರಾಯಣಸ್ವಾಮಿ ಕೇವಲ 25 ದಿನಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.
Discussion about this post