ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಚಿತ್ರದುರ್ಗ ಜಿಲ್ಲೆಯ ಭರಮಸಾಗರ… ಹೆಸರೇ ಸೂಚಿಸುವಂತೆ ಇಲ್ಲಿನ ಪರಿಸರ ಹಾಗೂ ಸುತ್ತಮುತ್ತಲಿನ ದೇವಾಲಯಗಳು. ಇವುಗಳ ಮಧ್ಯೆ ಇರುವುದೆ ಶ್ರೀ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕರು ಕಟ್ಟಿಸಿದ ಸುಮಾರು 1000 ಎಕರೆ ವಿಸ್ತೀರ್ಣವಾದ ವಿಶಾಲವಾದ ಕೆರೆ.
ಸುಮಾರು 10 ವರ್ಷಗಳಿಂದಲೂ ಈ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಇಲ್ಲದೆ ಈ ಕೆರೆಗಳು ಬರಿದಾಗಿದ್ದವು. ಈ ಸಂದರ್ಭದಲ್ಲಿ ರೈತರ, ನಾಗರೀಕರು, ಜನಸಾಮಾನ್ಯರ ಮತ್ತು ಮಾಜಿ ಮುಖ್ಯಮಂತ್ರಿಗಳಿಂದ ಮತ್ತು ಊರಿನ ಮುಖಂಡರು. ಹಿರಿಯರು ಸಹಕಾರದಿಂದ ಈ ಭಾಗದ ಪೂಜ್ಯ ಗುರುಗಳ ಆಶೀರ್ವಾದದಿಂದ ಭರಮಸಾಗರದ ದೊಡ್ಡ ಕೆರೆಗೆ ಶ್ರೀಶ್ರೀ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಮುಖಂಡತ್ವ ಮತ್ತು ಆಶೀರ್ವಾದದಿಂದ ತುಂಗಭದ್ರೆಯ ಆಗಮನವಾಗಿ, ಇಲ್ಲಿನ ರೈತರಿಗೆ ಹಬ್ಬದ ವಾತಾವರಣ ಮತ್ತು ಮರು ಜೀವ ಬಂದಿದೆ. ತೋಟ ಹೊಲಗಳಲ್ಲಿ ಹಸಿರು ಕಾಣುವ ಕಾಲ ಒದಗಿ ಬಂದಿದೆ.
ಪ್ರವಾಸಿ ತಾಣ ಮತ್ತು ಪಕ್ಷಿ ಧಾಮಕ್ಕಾಗಿ ಮನವಿ
ಈ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸಿ ತಾಣಗಳು ಇರುವುದಿಲ್ಲ. ಈಗ ಈ ಕೆರೆಯನ್ನು ರಿಸರ್ವ್ ಟ್ಯಾಂಕ್ ಆಗಿ ಮಾಡಿರುವುದರಿಂದ ಕೆರೆಯಲ್ಲಿ ಸದಾಕಾಲ ನೀರು ಇರುತ್ತದೆ. ಈ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಹತ್ತಿರ ಇರುವ ಭರಮಸಾಗರದ ಕೆರೆಯ ಕೋಡಿಯ ಹತ್ತಿರ ಇರುವ ಊರಿನ ಚೌಡೇಶ್ವರಿ ದೇವಾಲಯದ ಸುತ್ತಮುತ್ತಲು ಹೆಚ್ಚಿನ ಸತ್ಕಾರಿ ಜಾಗದಲ್ಲಿ ಪ್ರವಾಸಿತಾಣವನ್ನಾಗಿ ಮಾಡಬೇಕು ಮತ್ತು ಅತಿ ಹೆಚ್ಚಿನ ಪಕ್ಷಿಗಳು ಈ ಭಾಗದಲ್ಲಿ ಬರುವುದರಿಂದ ಪಕ್ಷಿಧಾಮವನ್ನು ಮಾಡಿ ಅಭಿವೃದ್ದಿ ಮಾಡಲು ಮಾನ್ಯ ಪರಿಸರ ಮತ್ತು ಪ್ರವಾಸೋದ್ಯಮ ಸಚಿವರಾದ ಮಾನ್ಯ ಶ್ರೀ ಆನಂದ್ ಸಿಂಗ್’ರಲ್ಲಿ ಮನವಿ ಮೂಲಕ ವಿನಂತಿ ಮಾಡಿಕೊಳ್ಳುತ್ತೇವೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಶಿಕಾರಿಪುರದ ಹುಚ್ಚರಾಯನ ಕೆರೆಯನ್ನು ಅಭಿವೃದ್ದಿ ಮಾಡಿ ಪ್ರವಾಸಿತಾಣವನ್ನಾಗಿ ಮಾಡಿಸಿದರೋ ಹಾಗೇಯೇ ಇಲ್ಲಿಯೂ ಕೂಡ ಅದೇ ರೀತಿ ಮಾಡುವಂತೆ ಗ್ರಾಮಸ್ಥರ ಪರವಾಗಿ ಸುಮಾ ಚನ್ನೇಶ್ ಮನವಿ ಮಾಡಿದ್ದಾರೆ.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post