ಕಲ್ಪ ಮೀಡಿಯಾ ಹೌಸ್ | ಚೋರಡಿ(ಶಿವಮೊಗ್ಗ) |
ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದು ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದ ಜಿಂಕೆಯೊಂದನ್ನು ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಚೋರಡಿ ಬಳಿಯಲ್ಲಿ ನಡೆದಿದೆ.
ಇಲ್ಲಿನ ಹೊರಬೈಲ್ ಅರಣ್ಯದಿಂದ ದನಗಳ ಹಿಂಡಿನ ಜೊತೆಯಲ್ಲಿ ಜಿಂಕೆಯೊಂದು ಗ್ರಾಮಕ್ಕೆ ಬಂದಿದೆ ಎನ್ನಲಾಗಿದೆ. ಹೀಗೆ ಬಂದ ಜಿಂಕೆಯ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆದಿದ್ದು, ಅದನ್ನು ಅಟ್ಟಾಡಿಸುತ್ತಿದ್ದವು.
Also read: ಯಾತ್ರೆ ವೇಳೆ ಡಿಜೆ ವಾಹನಕ್ಕೆ ಹೈಟೆಕ್ಷನ್ ತಂತಿ ತಗುಲಿ ದುರಂತ | 9 ಯಾತ್ರಿಗಳ ಸಾವು
ನಾಯಿಗಳು ಬೊಗಳುವುದನ್ನು ಗಮನಿಸಿದ ಗ್ರಾಮಸ್ಥರು ಜಿಂಕೆಯ ಸಂಕಷ್ಟವನ್ನು ಕಂಡು ದಾವಿಸಿದ್ದಾರೆ. ನಾಯಿಗಳನ್ನು ಓಡಿಸಿ, ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆದಿದ್ದಾರೆ. ತತಕ್ಷಣವೇ ಪಶು ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿ, ಬಳಿಕ ಕಾಡಿಗೆ ಬಿಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post