ಯುಗ ಯುಗಕ್ಕೆ ತಕ್ಕ ಅವತಾರಗಳಾಗುವುದು ಭಾರತದಲ್ಲಿ ಮಾತ್ರ. ಪವಿತ್ರ ನದಿಗಳು, ಪವಿತ್ರ ಕ್ಷೇತ್ರಗಳು, ಋಷಿ ಮುನಿಗಳ ಯಾಗ ಯಜ್ಞ ತಪಸ್ಸುಗಳು ದುಷ್ಟರಿಂದ ಭಂಗಗೊಂಡು ಮಲಿನವಾದಾಗ ದುಷ್ಟರ ಉತ್ಪತ್ತಿ ಹೆಚ್ಚಾಗುತ್ತದೆ. ಆಗ ರಾಕ್ಷಸರ ಕಾರುಭಾರಗಳು ಅಧಿಕವಾಗುತ್ತದೆ. ಯಾವಾಗ ಪ್ರಜೆಗಳಿಗೆ ಮಲಿನತೆಯನ್ನು ಶುದ್ಧೀಕರಿಸುವ ಮನಸ್ಸು ಬರುತ್ತದೋ ಆಗ ದುಷ್ಟರೂ ಒಬ್ಬೊಬ್ಬರಾಗಿ ನಾಶ ಹೊಂದುತ್ತಾರೆ.
ಇದು ಕೇವಲ ವಾಕ್ಯ ಶೈಲಿಯಲ್ಲ ಸಿದ್ಧಾಂತ. ಇದು ಈಗ ಹೊಸದೇನಲ್ಲ. ಪುರಾಣ ಕಾಲದಿಂದಲೂ ನಡೆದು ಬಂದದ್ದು. ಹಾಗಾಗಿ ಭಾರತದಲ್ಲಿ ಇತಿಹಾಸ ಪುರಾಣೇಭ್ಯೋನಮಃ ಎನ್ನುತ್ತಾ, ಆ ಪುರಾಣ ರಚಿಸಿದಂತಹ ಕತೃವಿನ ಸ್ಮರಣೆಯಾದ ಶ್ರೀ ವೇದವ್ಯಾಸಾಯ ನಮಃ ಎಂದು ಪೂಜಾದಿಗಳ ಪೂರ್ವದಲ್ಲೇ ಸ್ಮರಿಸುತ್ತೇವೆ. ಯಾವಾಗ ಯಾವುದರ ಬಗ್ಗೆ ಸ್ಮರಣೆಗಳಿರುತ್ತೋ ಆವಾಗಲೇ ಆಯಾಯ ಸ್ವರೂಪಗಳು ನಮ್ಮಲ್ಲಿ ಬರುತ್ತದೆ.
ಕೃತಯುಗದಲ್ಲಿ ಶುಂಭ ನಿಶುಂಭ, ಮಹಿಷಾದಿ ದಾನವರ ಸ್ಮರಣೆ ಮಾಡಿದ ಪ್ರಜೆಗಳು ಅದೇ ಸ್ವರೂಪದಿಂದ ಜಗತ್ತನ್ನು ನಾಶ ಮಾಡಲು ಹೊರಟರು. ತದನಂತರ ಆದಿಮಾಯೆಯ ಧ್ಯಾನದಿಂದ ಆದಿಮಾಯೆಯ ಸೃಷ್ಟಿಯಾಗಿ ಅವಳ ಸ್ನರಣೆಯಿಂದ ಆದಿಮಾಯೆಯರು ಸೃಷ್ಟಿಯಾದರು. ಗೌರಿ, ಪಾರ್ವತಿ, ಲಕ್ಷ್ಮೀ ಇತ್ಯಾದಿ. ಇತ್ತೀಚೆಗಿನ ಝಾನ್ಸಿ ರಾಣಿ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವಾದಿಗಳು ದುರ್ಗಾ ಸ್ವರೂಪದಲ್ಲಿ ಸೃಷ್ಟಿಯಾದರು.
ಹಿರಣ್ಯಾಕ್ಷ-ಹಿರಣ್ಯ ಕಶಿಪು ಆಡಳಿತದಲ್ಲಿ ಮೊದಲು ಅದೇ ತದ್ರೂಪ ದಾನವರಾದರು ಜನಗಳು. ನಂತರ ದುಷ್ಟ ವಧೆಗಾಗಿ ನೃಸಿಂಹಾವತಾರ ಆದಾಗ ನೃಸಿಂಹನ ಸ್ಮರಣೆಯಲ್ಲಿ ಹಲವು ನರಸಿಂಹರು ಹುಟ್ಟಿಕೊಂಡರು.
ಪರಶುರಾಮಾವತಾರವಾದ ಬಳಿಕವೇ ತದ್ರೂಪಿ (ವಿಷ್ಣು ಅವತಾರ) ಶ್ರೀರಾಮನ ಅವತಾರವಾಯಿತು. ಮಹಾಭಾರತದಲ್ಲಿ ಸಹಸ್ರ ಕೌರವರು ದುರ್ಯೋಧನನ ಪ್ರೇರಣೆಯಿಂದ ದುಷ್ಕಾರ್ಯಕ್ಕಿಳಿದರು. ಕೊನೆಗೆ ಸಂಭವಾಮಿ ಯುಗೇ ಯುಗೇ ಎಂದ ಶ್ರೀಹರಿಯು ಕೃಷ್ಣನಾಗಿ ಬಂದಾಗ, ಅವನ ನಡೆನುಡಿಗಳಿಂದ ಪ್ರೇರಿತರಾಗಿ ಕೋಟಿ ಕೃಷ್ಣರು ಉದಯಿಸಿದರು. ಈ ಒರಂಪರೆ ಚಾಣಕ್ಯನಲ್ಲಿಯವರೆಗೆ ಸಾಗುತ್ತದೆ.
ತದನಂತರ ದುರುಳ ಮೊಗಲರು, ಆಂಗ್ಲರು ಹುಟ್ಟಿ, ಅವರ ಪ್ರಭಾವ ಹೆಚ್ಚಾಗುತ್ತಾ, ಸ್ವಾತಂತ್ರ್ಯಾ ನಂತರವೂ ಅವರ ಶಿಷ್ಯರಂತೆ ನೆಹರು ಕುಟುಂಬ ಎದ್ದು ನಿಂತಿತು. ಆದರೆ ನಾನು ಆ ದುಷ್ಟ ಪರಂಪರೆ ಎಂದು ಯಾರಿಗೂ ಹೇಳುವ ಮನಸ್ಸಿರಲಿಲ್ಲ. ಯಾಕೆಂದರೆ ನಾವು ಕಳ್ಳರೆಂದು ಯಾರಾದರೂ ಹೇಳಿಕೊಳ್ಳುವುದುಂಟೇ. ಒಟ್ಟಿನಲ್ಲಿ followers ಆಗಿ ತಿನ್ನಲು ಸಿಕ್ಕಿದರೆ ಸಾಕು. ಇಷ್ಟೆಲ್ಲ ಆದ ಮೇಲೆ ಮತ್ತೆ ಸಂಭವಾಮಿ ಯುಗೇ ಯುಗೇ ಎಂಬಂತೆ ನರೇಂದ್ರ ಮೋದಿಯವರ ಸೃಷ್ಟಿಯಾಯಿತು. ಇದು ಎಷ್ಟು ಫಲ ನೀಡಿತೆಂದರೆ ವಿದೇಶದಲ್ಲೂ ಪುಟಿನ್, ಟ್ರಂಪ್ ಮೊದಲಾದ ದುಷ್ಟ ಸಂಹಾರಕರಿಗೆ ಪ್ರೇರಣೆ ನೀಡಿತು. ದೇಶದೊಳಗಂತೂ ಪ್ರಜೆಗಳು ಎದೆ ತಟ್ಟಿ ನಾನೊಬ್ಬ ‘ಚೌಕೀದಾರ’ ಎಂದು ಹೇಳುವಂತೆ ಮಾಡಿತು. ನಾನೊಬ್ಬ ನೆಹರೂ ವಾದಿ, ನಾನೊಬ್ಬ ರಾಹುಲ ಎಂದು ಹೇಳಲು ಮುಜುಗರ ಆಗುತ್ತಿರುವುದು ಯಾಕೆಂದರೆ ರಾಹುಲನಂತಾಗಲು ಬಯಸುವುದಿಲ್ಲ ಮತ್ತು ಮೋದಿಯಂತೆ ಎಂದು ಹೇಳಲು ನೆಹರೂ ಪರಂಒರೆಯ ಗಂಜಿಯ ಋಣ!
ಅವರ ಮನದೊಳಗೂ ಮೋದಿಯ ಬಗ್ಗೆ ಶ್ಲಾಘನೆ ಇದ್ದರೂ ಹೇಳುವುದಕ್ಕಾಗದೆ ಒದ್ದಾಟ ಇದೆ. ಮೋದಿಯವರು ಪುಕ್ಸಟ್ಟೆ ರೊಟ್ಟಿ ಕೊಡಲ್ಲ. ಕರ್ಮ ನಿಷ್ಟೆಗೆ ತಕ್ಕಂತೆ ಫಲ. ಇವರಲ್ಲಿ ಎಂತಹ ಹೀನ ಕೆಲಸಕ್ಕೂ ರೊಟ್ಟಿ ಸಿಕ್ಕೇ ಸಿಗುತ್ತದೆ. ಹಾಗಾಗಿ ಮನದೊಳಗೆ ಮೋದಿ ಇದ್ದರೂ, ಪುಕ್ಸಟ್ಟೆ ರೊಟ್ಟಿಯ ಋಣವು ಬಾಧಿಸುತ್ತದೆ. ತಾತ್ವಿಕ ಜನರು ರೊಟ್ಟಿ ಇಲ್ಲದಿದ್ದರೂ ಅಡ್ಡಿಯಿಲ್ಲ, ‘ನಾನು ಚೌಕೀದಾರ’ ಎನ್ನುವ ನೈತಿಕ ಬಲದಲ್ಲಿ ಇರುತ್ತಾರೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post