ಕಲ್ಪ ಮೀಡಿಯಾ ಹೌಸ್ | ಚುರು |
ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನವೊಂದು #Indian Army Fighter Jet Jaguar ಪತನಗೊಂಡಿದ್ದು, ಪೈಲಟ್ ಸೇರಿದಂತೆ ಇಬ್ಬರು ಹುತಾತ್ಮರಾಗಿದ್ದಾರೆ.
ಬಯಲು ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಅಪಘಾತದ ಸ್ಥಳದಿಂದ ಎರಡು ಶವಗಳನ್ನು ಹೊರತೆಗೆಯಲಾಗಿದ್ದು, ಅವುಗಳಲ್ಲಿ ಒಂದು ಪೈಲಟ್’ನದ್ದಾಗಿರಬಹುದು ಎಂದು ಹೇಳಲಾಗಿದೆ.
ಯುದ್ಧ ವಿಮಾನ ಪತನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ವಿಡಿಯೋದಲ್ಲಿ ಅಪಘಾತದ ಸ್ಥಳದಿಂದ ಹೊಗೆ ಬರುತ್ತಿರುವುದನ್ನು ಮತ್ತು ಸ್ಥಳೀಯ ಅಧಿಕಾರಿಗಳು ಪ್ರದೇಶಕ್ಕೆ ಧಾವಿಸುತ್ತಿರುವುದನ್ನು ಕಾಣಬಹುದು. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post