ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶುಕ್ರವಾರ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಂತ್ಯಸಂಸ್ಕಾರ ಇಂದು ನೆರವೇರಿದ್ದು, ಇದಕ್ಕೂ ಮುನ್ನ ಗೌರವ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಪ್ಪು ಹಣೆಗೆ ಮುತ್ತಿಟ್ಟು ವಿದಾಯ ಹೇಳಿದರು.
ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜಕುಮಾರ್ ಸಮಾಧಿ ಸನಿಹದಲ್ಲಿಯೇ ಪುನೀತ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇದಕ್ಕೂ ಮುನ್ನ, ಸಕಲ ಸರ್ಕಾರಿ ಗೌರವ ಸಲ್ಲಿಸಿ, ರಾಷ್ಟ್ರ ಧ್ವಜವನ್ನು ಪತ್ನಿ-ಪುತ್ರಿಯರಿಗೆ ಹಸ್ತಾಂತರ ಮಾಡಲಾಯಿತು.
ಈ ವೇಳೆ ಅಂತಿಮ ವಿದಾಯ ಸಲ್ಲಿಸಿದ ಸಿಎಂ ಬೊಮ್ಮಾಯಿ ಅವರು ಭಾವನಾತ್ಮಕವಾಗಿ ಕಂಡುಬಂದರು. ಅಪ್ಪು ಪಾರ್ಥಿವ ಶರೀರವನ್ನು ಮುಟ್ಟಿ ಸವರಿದ ಅವರು ಪುನೀತ್ ಹಣೆಗೆ ಮುತ್ತಿಟ್ಟು ಅಂತಿಮ ವಿದಾಯ ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post