ಬೆಂಗಳೂರು: ಇಂದು ಇಹಲೋಕ ತ್ಯಜಿಸಿದ ಕೇಂದ್ರ ಸಚಿವ ಅನಂತಕುಮಾರ್ ಅವರ ನಿವಾಸಕ್ಕೆ ತೆರಳಿದ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ವೇಳೆ ಭಾವುಕರಾದರು.
ಇಂದು ಸಂಜೆ ಬಸವನಗುಡಿಯಲ್ಲಿರುವ ಅನಂತಕುಮಾರ್ ಅವರ ನಿವಾಸಕ್ಕೆ ತೆರಳಿದ ಸಿಎಂ, ಅಗಲಿನ ನಾಯಕನಿಗೆ ಅಂತಿಮ ನಮನ ಸಲ್ಲಿಸಿರುವ. ಪಾರ್ಥಿವ ಶರೀರದ ಮುಂದೆ ನಿಂತ ವೇಳೆ ತೀವ್ರ ದುಃಖತಪ್ತರಾಗಿ ಅವರು ಕಂಡುಬಂದರು.
ಇಂದು ಬೆಳಗ್ಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಸಲ್ಲಿಸಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸಂತಾಪ ಸೂಚಿಸಿದರು. ನಂತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.#AnanthKumar pic.twitter.com/c0skilvF3T
— CM of Karnataka (@CMofKarnataka) November 12, 2018
ಆನಂತರ, ಅನಂತಕುಮಾರ್ ಅವರ ಕುಟುಂಬಸ್ತರೊಂದಿಗೆ ಮಾತನಾಡಿದ ಅವರು, ಸಾಂತ್ವನ ಹೇಳಿದರು.
ಇನ್ನು, ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಸಿಎಂ, ಅನಂತಕುಮಾರ್ ಅವರ ಅಗಲಿಕೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾತ್ರವಲ್ಲ, ನನಗೂ ಸಹ ವೈಯಕ್ತಿಕವಾಗಿ ನಷ್ಟವಾಗಿದೆ. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರ ನಿಧನದಿಂದ ಆಗಿರುವ ನಷ್ಟವನ್ನು ಊಹೆ ಮಾಡಲೂ ಸಾಧ್ಯವಿಲ್ಲ ಎಂದು ದುಃಖ ವ್ಯಕ್ತಪಡಿಸಿದರು.
Discussion about this post