ಕಲ್ಪ ಮೀಡಿಯಾ ಹೌಸ್
ಕೊರೋನಾ ಲಾಕ್‌ಡೌನ್ ನಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಗಳು ಹೇಳತೀರದಾಗಿದೆ. ಅನೇಕರು ವೀಡಿಯೋ ಗೇಮ್‌ಗೆ ಬಲಿಯಾಗಿದ್ದರೆ, ಇನ್ನೂ ಕೆಲವರು ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದಾರೆ. ಕೆಲವರು ಖಿನ್ನತೆಗೆ ದೂಡಲ್ಪಟ್ಟಿದ್ದರೆ, ಇನ್ನು ಕೆಲವರು ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಿ ವಿದ್ಯಾರ್ಥಿಗಳನ್ನು ಸೃಜನಶೀಲವಾಗಿಡಲು ವಿವೇಕ ಶಿಕ್ಷಣ ವಾಹಿನಿಯು ಸ್ಪರ್ಧಾಮೃತಂ ಎಂಬ ಆನ್ ಲೈನ್ ಸ್ಪರ್ಧೆಗಳನ್ನು ಆಯೋಜಿಸಿದೆ.
25,000 ರೂ.ಗಳ ಬಹುಮಾನವನ್ನು ಘೋಷಿಸಿ, 10 ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ಅವಕಾಶವನ್ನು ನೀಡುತ್ತಿದೆ. ಆಸಕ್ತ ಮಕ್ಕಳು ಇದರಲ್ಲಿ ಪಾಲ್ಗೊಳ್ಳಬಹುದು.
ಸ್ಪರ್ಧೆಗಳ ವಿವರ:
ಭಾಷಣ ಸ್ಪರ್ಧೆ, ನೀತಿ ಕಥೆ ಹೇಳುವ ಸ್ಪರ್ಧೆ, ಹರಿಕಥಾ ಸ್ಪರ್ಧೆ, ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ, ಭಕ್ತಿಗೀತೆ ಗಾಯನ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ಜನಪದ ಗೀತೆ ಗಾಯನ ಸ್ಪರ್ಧೆ, ಏಕಪಾತ್ರಾಭಿನಯ ಸ್ಪರ್ಧೆ, ಮಹಾಪುರುಷರ ಜೀವನ ಚರಿತ್ರೆ ಹೇಳುವ ಸ್ಪರ್ಧೆ, ಭಗವದ್ಗೀತಾ ಪಾರಾಯಣ ಸ್ಪರ್ಧೆ (ಭಕ್ತಿಯೋಗ).
ಸೂಚನೆಗಳು:
ಎಲ್ಲ ಸ್ಪರ್ಧೆಗಳಿಗೂ ಗರಿಷ್ಟ ಕಾಲ ಮಿತಿ 5 ನಿಮಿಷಗಳು ಮಾತ್ರ.
ಸ್ಪರ್ಧಿಗಳು ಕನ್ನಡ ಅಥವಾ ಇಂಗ್ಲೀಷ್ ಭಾಷೆಯನ್ನು ಮಾತ್ರ ಬಳಸಬಹುದಾಗಿದೆ.
ಭಾಷಣದ ವಿಷಯ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣವನ್ನು ಕಡ್ಡಾಯಗೊಳಿಸುವುದರ ಅವಶ್ಯಕತೆ
ಸ್ಪರ್ಧೆಗಳು 5 ನಿಮಿಷಗಳಿಗೆ ಮೀರದಂತೆ ವೀಡಿಯೋ ಮಾಡಿ ಮೊ:9880649090 ನಂಬರ್‌ಗೆ ಟೆಲಿಗ್ರಾಫ್ ಆಪ್‌ನಲ್ಲಿ ಕಳಿಹಿಸಿಕೊಡುವುದು. (ವಾಟ್ಸ್‌ಪ್‌ನಲ್ಲಿ 17ಎಂಬಿಗಿಂತ ಜಾಸ್ತಿ ಸಾಂದ್ರತೆ ವೀಡಿಯೋಗಳು ಸೆಂಡ್ ಆಗುವುದಿಲ್ಲ. ಹೀಗಾಗಿ ಟೆಲಿಗ್ರಾಫ್ ಆಪ್ ಅನ್ನೆ ಬಳಸಿ. ಈ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.) ಸ್ಪರ್ಧೆಗಳು ಕೇವಲ ವೈಯಕ್ತಿಕವಾಗಿ ಇರುತ್ತದೆ ಹೊರತು, ಸಾಮೂಹಿಕ ಗುಂಪು ಸ್ಪರ್ಧೆ ಇರುವುದಿಲ್ಲ. ಆದರೆ ಒಬ್ಬರು ಎಷ್ಟು ಸ್ಪರ್ಧೆಯಲ್ಲಿ ಬೇಕಾದರೂ ಭಾಗವಹಿಸಬಹುದು.
ವೀಡಿಯೋದ ಜೊತೆಗೆ ತಮ್ಮ ಹೆಸರು, ತರಗತಿ, ಶಾಲೆಯ ಹೆಸರು ಮತ್ತು ತಮ್ಮ ಮನೆಯ ಪೂರ್ಣ ವಿಳಾಸವನ್ನು ಕಳುಹಿಸಬೇಕು. ಹಾಡು, ಗೀತಾ ಪಠಣ ಹಾಗು ಹರಿಕಠೆಗೆ ಕರೋಕೆ, ಸಂಗೀತ ಉಪಕರಣಗಳು ಅಥವಾ ಶ್ರುತಿ ಪೆಟ್ಟಿಗೆಯನ್ನು ಬಳಸುವಂತಿಲ್ಲ. ಏಕಪಾತ್ರಭಿನಯಕ್ಕೆ ವಿಶೇಷ ವೇಷಭೂಷಣವು ಕಡ್ಡಾಯವಲ್ಲ.
ವೀಡಿಯೋಗಳನ್ನು ಮೇ.30ಕ್ಕೆ ಮುಂಚೆ ಕಳುಹಿಸಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಸ್ಪರ್ಧಿಗಳು ಹಾಡಿನ ಸಾಹಿತ್ಯ, ಭಾಷಣದ ಪಾಯಿಂಟ್‌ಗಳು, ಗೀತಾ ಶ್ಲೋಕಗಳು, ಹರಿಕಥೆ, ಏಕಪಾತ್ರಭಿನಯದ ಸ್ಕ್ರಿಪ್ಟ್ ಅನ್ನು ಬರೆದಿರುವ ಕಾಗದವನ್ನು ಕೈಲಿ ಹಿಡಿದು ಬಳಸಲು ಅವಕಾಶವಿದೆ. ಆದರೆ ಕಾಗದ ಬಳಸದೇ ಇದ್ದರೆ ವೀಡಿಯೋ ನೋಡಲು ಉತ್ತಮವಾಗಿರುತ್ತದೆ ಎಂಬುದನ್ನು ಗಮನಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ: 9880649290ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post