Saturday, August 2, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಸಮಾರೋಪ

ಸಂಘಟಿತ ಹವ್ಯಕ ಸಮಾಜದ ವಿರಾಟ್ ದರ್ಶನ

December 30, 2018
in ಬೆಂಗಳೂರು ನಗರ
0 0
0
Share on facebookShare on TwitterWhatsapp
Read - 3 minutes

ಬೆಂಗಳೂರು: ಸಮಾಜ ಪುರುಷ ಮೈಕೊಡವಿ ಎದ್ದು ನಿಂತಿರುವ ಈ ಸನ್ನಿವೇಷವೇ ವಿಶ್ವ ಹವ್ಯಕ ಸಮ್ಮೇಳನ, ಸಮುದ್ರೋಲ್ಲಂಘನ ಸಮಯದಲ್ಲಿ ಆಂಜನೇಯ ಮೈಕೊಡವಿ ಎದ್ದು ನಿಂತನಂತೆ, ಆಗ ಸಹಸ್ರಾರು ಜನ ಅವನನ್ನು ಆಶ್ಚರ್ಯ ಚಕಿತರಾಗಿ ನೋಡಿದರಂತೆ, ಹಾಗೆಯೇ ಹವ್ಯಕ ಸಮಾಜ ಮೈಕೊಡವಿ ಜಾಗೃತವಾಗಿ ನಿಂತಿದೆ. ಜಗತ್ತು ಇದನ್ನು ಗಮನಿಸಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಐತಿಹಾಸಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ಅನುಗ್ರಹಿಸಿದ ಪೂಜ್ಯ ಶ್ರೀಗಳು, ಈ ಐತಿಹಾಸಿಕ ಕಾರ್ಯಕ್ರಮವನ್ನು ಮಹಾದೀಪಾವಳಿ ಎಂದು ಭಾವಿಸುತ್ತೇವೆ. ದೀಪಾವಳಿಯಲ್ಲಿ ಮನೆಯವರೆಲ್ಲ ಸೇರಿ ಸಂಭ್ರಮಿಸುತ್ತಾರೆ. ಇಲ್ಲಿ ವಿಶ್ವದ ಎಲ್ಲಾ ಭಾಗಗಳ ಹವ್ಯಕರು ಬಂದು ಸೇರಿದ್ದೀರಿ, ವಿಶ್ವವೇ ಒಂದು ಕುಟುಂಬವಾಗಿ ಸಂಘಟಿತರಾಗಿ ಸಂಭ್ರಮಿಸಿದ್ದೀರಿ, ಎಲ್ಲರ ಮುಖದಲ್ಲೂ ಸಂತಸವಿದೆ ಇದು ಸಂತಸದ ವಿಚಾರ ಎಂದರು.
ವಿವಾದಗಳು, ಕಾರ್ಯಕ್ರಮಗಳನ್ನು ಹಾಳು ಮಾಡಲು ಯೋಚಿಸುವುದು ಎಲ್ಲಾ ದೊಡ್ಡ ಕಾರ್ಯಕ್ರಮಗಳಲ್ಲಿಯೂ ಇರುತ್ತದೆ. ಆದರೆ ನಾವು ಸಕಾರಾತ್ಮಕವಾಗಿರಬೇಕು, ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಸಮುದ್ರ ಮಥನ ನಡೆದು ವಿಷ ಬಂದ ನಂತರವಷ್ಟೇ ಅಮೃತ ಸಿಗುವಂತದ್ದು ಎಂದ ಶ್ರೀಗಳು, ಇಂತಹ ಕಾರ್ಯಕ್ರಮಗಳನ್ನು ಬಿಟ್ಟುಕೊಳ್ಳ ಬಾರದು, ಯಾವುದೋ ಕಾರಣದಿಂದ ಹೊರಗುಳಿದರೆ ಅಂತವರಿಗೆ ಬನ್ನಿ! ಸಮಾಜದ ಜೊತೆ ಸೇರಿ ಎಂಬ ಕರೆಯನ್ನು ಕೊಡುತ್ತೇವೆ ಎಂದು ಕರೆ ನೀಡಿದರು.

ಮೂಲ ದಕ್ಷಿಣಾಮ್ನಾಯ ಕೂಡ್ಲಿ ಶೃಂಗೇರಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಭಗವಾನ್ ಶ್ರೀರಾಮ ಯಜ್ಞದ ಮೂಲಕ ಬಂದ ಪಾಯಸದ ಪ್ರಭಾವದಿಂದ ಹುಟ್ಟಿದವನು, ಅಂತೆಯೇ ಯಜ್ಞ – ಯಾಗಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ ಸಮಾಜ ಹವ್ಯಕ ಸಮಾಜ.

ಇಂದು ಮಠಮಾನ್ಯಗಳ ಮೇಲೆ ದಾಳಿಗಳಾಗುತ್ತಿದ್ದು, ಸಮಾಜ ಇದನ್ನು ಖಂಡಿಸಬೇಕಿದೆ. ಕೈಯನ್ನು ಮುಷ್ಟಿ ಮಾಡಿದಾಗ ಶಕ್ತಿ ಉಂಟಾಗುತ್ತದೆ, ಅಂತೆಯೇ ಸಮಾಜ ಸಂಘಟಿತವಾದಾಗ ಅದಕ್ಕೆ ಶಕ್ತಿ ಬರುತ್ತದೆ ಎಂದರು.


ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಅಂದು ಮಯೂರ ವರ್ಮನ ಕಾಲದಲ್ಲಿ ತಮ್ಮ ಜ್ಞಾನದಿಂದ ಗುರುತಿಸಿಕೊಂಡವರು ಹವ್ಯಕರು, ಇಂದಿಗೂ ತಮ್ಮ ಆ ಜ್ಞಾನದ ಪರಂಪರೆಯನ್ನು ಉಳಿಸಿಕೊಂಡವರು ಹವ್ಯಕರು. 75 ವರ್ಷಗಳ ಕಾಲ ಸಂಘಟನೆಯನ್ನು ನಡೆಸುವುದು ಸುಲಭದ ಮಾತಲ್ಲ, ಪ್ರಜ್ಞಾವಂತ ಸಮಾಜವಾದ ಈ ಹವ್ಯಕ ಸಮಾಜ ಅದನ್ನು ಸಾಧಿಸಿತೋರಿಸಿದೆ ಎಂದರು.

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಂಕುಚಿತ ಮನೋಭಾವ ಇಲ್ಲದೇ, ವಿಶಾಲದೃಷ್ಟಿಯಿಂದ ನೋಡುವವನು ನಿಜವಾದ ಬ್ರಾಹ್ಮಣ. ಆಪತ್ತು ವಿಪತ್ತು ಎದುರಾದರೂ ಸತ್ಯಪಥವನ್ನು ಬಿಡದವರು ಬ್ರಾಹ್ಮಣರು, ಅದರ ಮೂರ್ತರೂಪ ಹವ್ಯಕ ಜನಾಂಗ.ಹವ್ಯಕ ಸಮಾಜ ಬದಲಾಗಿಲ್ಲ, ಅಂದು ಅಗ್ನಿಮುಖದಲ್ಲಿ ಮಾತ್ರ ಯಜ್ಞ ನಡೆಯುತ್ತಿತ್ತು, ಇಂದು ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನಯಜ್ಞವನ್ನು ಸಮಾಜದ ಬಂಧುಗಳು ಮಾಡುತ್ತಾರೆ ಎಂದರು.

ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ,   ಸಮುದಾಯದ ಸಂಘಟನೆಗಳು ಇತರ ಸಮುದಾಯದ ಮೇಲೆ ದಾಳಿಗಲ್ಲ, ಅದು ಲೋಕದ ಒಳಿತಿಗೆ ಕಾರಣವಾಗಬೇಕು. ಒಬ್ಬ ಕೇಂದ್ರ ಸಚಿವನಾಗಿ ಹವ್ಯಕ ಸಮಾಜದ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ. ಆಕ್ರಮಣಗಳಾಗಲು ಅವಕಾಶ ನೀಡುವುದಿಲ್ಲ ಎಂದರು.

ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಅರ್ಥವಿಲ್ಲದ – ಆಧಾರರಹಿತ ನೂರಾರು ಪ್ರಶ್ನೆಗಳಿಗೆ ಅರಮನೆ ಮೈದಾನದ ವಿಶ್ವ ಹವ್ಯಕ ಸಮ್ಮೇಳನ ಉತ್ತರವಾಗಿದೆ. ನಮ್ಮಲ್ಲಿ ಧಿಕ್ಕಾರ – ಬಹಿಷ್ಕಾರಗಳಿಗೆ ಬೆಲೆಯಿಲ್ಲ, ಜೈಕಾರಕ್ಕಷ್ಟೇ ನಮ್ಮಲ್ಲಿ ಬೆಲೆ ಎಂಬುದನ್ನು ವಿರಾಟ್ ಹವ್ಯಕ ಸಮುದಾಯ ಸಾಕ್ಷ್ಯೀಕರಿಸಿದೆ ಎಂದರು.
ಸ್ವಾಗತ ಭಾಷಣ ಮಾಡಿದ ಸಮ್ಮೇಳನದ ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಸಮ್ಮೇಳನಕ್ಕೆ ಹೋಗಬೇಡಿ, ಬಹಿಷ್ಕರಿಸಿ ಎಂಬ ಕರೆಯ ನಡುವೆಯೂ ಮೂರು ದಿನಗಳಲ್ಲಿ ಸುಮಾರು 75 ಸಾವಿರ ಜನ ಬಂದು ಹವ್ಯಕ ಸಂಪ್ರದಾಯವನ್ನು ಆಸ್ವಾದಿಸಿದ್ದಾರೆ. ಇದು ಹವ್ಯಕ ಸಮಾಜದ ಸಂಘಟನೆಗೆ ಸಾಕ್ಷಿ ಎಂದರು. 
 
ಅವಿಚ್ಛಿನ್ನ ಪರಂಪರೆಯ ಸಂರಕ್ಷಣೆಗೆ ಸಮಾಜವಿದೆ : ಪ್ರಪಂಚದ ಏಕಮೇವ ಅದ್ವಿತೀಯ ಅವಿಚ್ಛಿನ್ನ ಶಂಕರಪರಂಪರೆಯನ್ನು ಹೊಂದಿರುವ ಕೀರ್ತಿ ಹವ್ಯಕ ಸಮಾಜದ್ದು, ಇದರ ವಿರುದ್ಧ ಆಕ್ರಮಣಗಳನ್ನು ಸಮಾಜ ಸಹಿಸುವುದಿಲ್ಲ. ಅಂತಹ ಆಕ್ರಮಣಗಳಿಗೆ ಈ ತುಂಬಿದ ಸಭೆ ಉತ್ತರವಾಗಿದ್ದು, ಗುರುಪೀಠದ ರಕ್ಷಣೆಗೆ ಸಮಾಜ ಸದಾ ಸಿದ್ಧವಾಗಿದೆ ಎಂದು ಡಾ. ಕಜೆ ಹೇಳುತ್ತಿದ್ದಂತೆ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆಗಳ ಮೂಲಕ ಬಾರಿ ಜನಬೆಂಬಲ ವ್ಯಕ್ತವಾಯಿತು.
 

ರಾಮಕೃಷ್ಣಾಶ್ರಮದ ಪೂಜ್ಯ ಶ್ರೀಚಂದ್ರಶೇಖರಾನಂದಜಿ, ನ್ಯಾಯಮೂರ್ತಿ ಶೈಲೇಂದ್ರ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಬಿ ವೈ ರಾಘವೇಂದ್ರ, ಶಾಸಕರಾದ ರವಿಸುಬ್ರಹ್ಮಣ್ಯ, ಅಶ್ವತ್ಥನಾರಾಯಣ್, ಆರತಿ ಕೌಂಡಿನ್ಯ,  ಉಪಸ್ಥಿರಿದ್ದು, ತಮ್ಮ ಸಂದೇಶವನ್ನು – ಹವ್ಯಕ ಸಮುದಾಯದ ಮೇಲಿರುವ ತಮ್ಮ ಒಲವನ್ನು ವ್ಯಕ್ತಪಡಿಸಿದರು. ಸಮ್ಮೇಳನದ ಗೌರವಾಧ್ಯಕ್ಚರಾದ ಶ್ರೀ ಭೀಮೇಶ್ವರ ಜೋಷಿಯವರು ಧನ್ಯವಾದ ಸಮರ್ಪಿಸಿ, ಗೌರವ ಸಮರ್ಪಿಸಿದರು. 75 ಗೋದಾನ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಗೋವು ಹಸ್ತಾಂತರ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ಹವ್ಯಕ ಯೋಧ ರತ್ನ ; 
ಇದಕ್ಕೂ ಮೊದಲು ಸೇನಾಪಡೆಗಳಲ್ಲಿ ಸೇವೆಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ 75 ಧೀರಯೋಧರಿಗೆ “ಹವ್ಯಕ ದೇಶರತ್ನ” ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶ್ರೀ ಚಕ್ರವರ್ತಿ ಸೂಲಿಬೆಲೆ, ಬ್ರಾಹ್ಮಣ ಸಮಾಜ ದೇಶಕ್ಕೆ ಏನು ಮಾಡಿದೆ ಎಂಬ ಪ್ರಶ್ನೆ ಎದುರಾದರೆ ಇದೊಂದು ಕಾರ್ಯಕ್ರಮದ ಫೋಟೋ ತೋರಿಸಿದರೆ ಸಾಕು, ಪ್ರಶ್ನೆ ಕೇಳಿದವರಿಗೆ ಉತ್ತರ ಸಿಗುತ್ತದೆ. ಬಿ.ಎಸ್.ಎಫ್ ನ ಮೊದಲ ಮಹಿಳಾ ಯೋಧೆ ಸ್ಪೂರ್ತಿ ಭಟ್ ಸೇರಿದಂತೆ ಯುದ್ಧದಲ್ಲಿ ಹೋರಾಡಿ ದೇಶ ಸೇವೆ ಸಲ್ಲಿಸುತ್ತಿರುವ ಈ ಅನರ್ಘ್ಯರತ್ನರನ್ನು ಸನ್ಮಾನಿಸುತ್ತಿರುವ ಹವ್ಯಕ ಮಹಾಸಭೆಯ ಕಾರ್ಯ ಶ್ಲಾಘನೀಯ. ಯುದ್ಧ ಗೆಲ್ಲುವುದು ಶಸ್ತ್ರಗಳಿಂದ ಅಲ್ಲ, ಶಸ್ತ್ರಗಳ ಹಿಂದೆ ಇರುವ ಸೈನಿಕರ ಆತ್ಮಸ್ಥೈರ್ಯದಿಂದ. ಭಾರತೀಯ ಸೇನೆಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು ಇಲ್ಲದ ಕಾಲದಲ್ಲೂ ದೇಶ ಯುದ್ಧ ಗೆದ್ದಿದೆ, ಇದಕ್ಕೆ ನಮ್ಮ ಸೈನಿಕರ ಧೈರ್ಯ ಕಾರಣ ಎಂದು ಅಭಿಪ್ರಾಯಪಟ್ಟರು.

ವಿದ್ಯಾರತ್ನ ಪ್ರಶಸ್ತಿ ಪ್ರದಾನ ಮಾಡಿದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮಾತನಾಡಿ, ಬಹುತೇಕ ಮಠಗಳು ನಾಟಕ ಕಂಪನಿಗಳಾಗಿವೆ. ಆದರೆ ಶ್ರೀರಾಮಚಂದ್ರಾಪುರಮಠದ ಶ್ರೀಗಳು ಹಾಗಲ್ಲ, ನಿಜವಾದ ಸಂತರು ಅವರು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸವಾಗುತ್ತದೆ ಎಂದು ತಮ್ಮ ಭಾವ ವ್ಯಕ್ತಪಡಿಸಿದರು.

Tags: 2nd world havyaka ConferenceB S yeddyurappaHavyaka Maha MandalaRaghaveshwara Swamijiಕೇಂದ್ರ ಸಚಿವ ಅನಂತಕುಮಾರ ಹೆಗಡೆರಾಘವೇಶ್ವರ ಭಾರತೀ ಶ್ರೀ
Previous Post

ನವದೆಹಲಿಯಲ್ಲಿ ಮೂರು ಡಿಗ್ರಿ ಸೆಲ್ಷೀಯಸ್ ತಾಪಮಾನ, ಶೀತಗಾಳಿ

Next Post

ದೇಶ-ಧರ್ಮ ರಕ್ಷಣೆಗೆ ಹವ್ಯಕ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಿವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ದೇಶ-ಧರ್ಮ ರಕ್ಷಣೆಗೆ ಹವ್ಯಕ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಿವು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File Image

ಶಿವಮೊಗ್ಗ ಶಾಲೆ ನೀರಿನ ಟ್ಯಾಂಕ್‌ಗೆ ವಿಷ; ಭಯೋತ್ಪಾದನೆಗೆ ಸಮ: ಸಿಎಂ ಸಿದ್ದರಾಮಯ್ಯ

August 2, 2025

ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕೀಟನಾಶಕದ ಶಂಕೆ: ಪ್ರಕರಣ ದಾಖಲು

August 2, 2025

ಅಧ್ಯಯನ-ಭರತನಾಟ್ಯ ಎರಡರ ಸಮನ್ವಯದಿಂದ ಬಹುಮುಖೀ ಸಾಧನೆ ಮಾಡಿ: ವೈಜಯಂತಿ ಕಾಶಿ

August 2, 2025

ವಿಷ ಸೇವಿಸಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು..!

August 2, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File Image

ಶಿವಮೊಗ್ಗ ಶಾಲೆ ನೀರಿನ ಟ್ಯಾಂಕ್‌ಗೆ ವಿಷ; ಭಯೋತ್ಪಾದನೆಗೆ ಸಮ: ಸಿಎಂ ಸಿದ್ದರಾಮಯ್ಯ

August 2, 2025

ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕೀಟನಾಶಕದ ಶಂಕೆ: ಪ್ರಕರಣ ದಾಖಲು

August 2, 2025

ಅಧ್ಯಯನ-ಭರತನಾಟ್ಯ ಎರಡರ ಸಮನ್ವಯದಿಂದ ಬಹುಮುಖೀ ಸಾಧನೆ ಮಾಡಿ: ವೈಜಯಂತಿ ಕಾಶಿ

August 2, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!