ಸೊರಬ: ಪ್ರಧಾನಿ ನರೇಂದ್ರ ಮೋದಿ ಅವರ 5 ವರ್ಷದ ಆಡಳಿತವನ್ನು ಮೆಚ್ಚಿ, ಅವರ ಕೈ ಬಲಪಡಿಸುವ ಸಲುವಾಗಿ ಹಂಚಿ ತಾಂಡಾದ ಹತ್ತಾರು ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು.
ಬುಧವಾರ ಶಾಸಕ ಎಸ್. ಕುಮಾರ್ ಬಂಗಾರಪ್ಪನವರ ನೇತೃತ್ವದಲ್ಲಿ ಹಂಚಿ ತಾಂಡಾದ ಕುಮಾರ ನಾಯಕ್, ವಸಂತ ನಾಯಕ್, ಆನಂದ ನಾಯಕ್, ಶೇಖರ್ ನಾಯಕ್, ರಮೇಶ್ ನಾಯಕ್, ಸೋಮಶೇಖರ್, ಸಂತೋಷ್, ವಿಷ್ಣು, ಮಂಜುನಾಯಕ, ಲಕ್ಷ್ಮಣ್ ನಾಯಕ್, ಮಂಜ ನಾಯಕ್, ರವಿ ನಾಯಕ್, ಮುಕೇಶ್ ನಾಯಕ್, ಕುಬೇರ ನಾಯಕ ಸುನಿಲ್ ನಾಯಕ್, ರಾಜು ನಾಯಕ್ ಇನ್ನಿತರರು ಕಾಂಗ್ರೆಸ್-ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಎ.ಎಲ್. ಅರವಿಂದ್, ಪ್ರಧಾನ ಕಾರ್ಯದರ್ಶಿ ನಿರಂಜನ್, ಪ್ರಭಾರಿಗಳಾದ ಗಜಾನನ ರಾಯರು, ಮುಖಂಡರಾದ ಎಂ.ಡಿ. ಉಮೇಶ್, ಭೋಗೇಶ್, ಮಂಜುನಾಥ್, ಶಿವಾಜಿ ನಾಯಕ್ ಹಂಚಿ ಉಪಸ್ಥಿತರಿದ್ದರು.
Discussion about this post