ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಪ್ರಧಾನಿ ನರೇಂದ್ರ ಮೋದಿ #PMNarendraModi ಅವರ ವಿರುದ್ಧ ಎರಡು ಬಾರಿ ಠೇವಣಿ ಕಳೆದುಕೊಂಡಿದ್ದ ವ್ಯಕ್ತಿಯೇ ಈ ಬಾರಿಯೂ ಅವರ ವಿರುದ್ಧವೇ ಕಾಂಗ್ರೆಸ್’ನಿಂದಲೇ #Congress ಸ್ಪರ್ಧಿಸುತ್ತಿದ್ದಾರೆ.
ಹೌದು… ಅಜಯ್ ರಾಯ್ #AjaiRai ಅವರೇ ಎರಡು ಬಾರಿ ಠೇವಣಿ ಕಳೆದುಕೊಂಡು ಮತ್ತೆ ಪ್ರಧಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ.

ಅಜಯ್ ರಾಯ್ ಅವರು ಕಳೆದ ಎರಡು ಚುನಾವಣೆಗಳಿಂದ ಅವರು ಠೇವಣಿ ಕಳೆದುಕೊಂಡಿದ್ದಾರೆ. ಈಗ ಮತ್ತೆ ಪ್ರಧಾನಿಯವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
2014 ರಲ್ಲಿ, ಅಜಯ್ ಕೇವಲ 7% ಮತಗಳನ್ನು ಪಡೆದಿದ್ದು, 2019 ರಲ್ಲಿ ಅವರು ಮೂರನೇ ಸ್ಥಾನದಲ್ಲಿದ್ದರು.

ಬಿಜೆಪಿ ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯ ಜೀವನ ಆರಂಭಿಸಿದ ಅಜಯ್ ರಾಯ್, ಸಮಾಜವಾದಿ #SamajavadiParty ಪಕ್ಷವನ್ನೂ ಸಹ ಸೇರಿದ್ದರು. ಉತ್ತರ ಪ್ರದೇಶ ಮೂಲದ ಅಜಯ್ ರಾಯ್ ಅವರು 5 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದವರು.
ಅವರು 1996 ರಿಂದ 2007ರ ನಡುವೆ 3 ಬಾರಿ ಬಿಜೆಪಿಯಿಂದ ಕೋಲಸ್ಲಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದವರು. 2009ರಲ್ಲಿ ಲೋಕಸಭೆಯಲ್ಲಿ ಅವರಿಗೆ ಟಿಕೆಟ್ ಬಿಜೆಪಿ ನೀಡದ ಕಾರಣ ಅವರು ಸಮಾಜವಾದಿ ಪಕ್ಷವನ್ನು ಸೇರಿದ್ದರು. ಅಲ್ಲಿ ಚುನಾವಣೆಯಲ್ಲಿ ಸೋತರು, ನಂತರ ಕೋಲಸ್ಲಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದರು.

ಈ ಮಧ್ಯೆ ಅವರು 2 ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದು, ಎರಡು ಬಾರಿ ಪರಾಭವಗೊಂಡಿದ್ದು ಇದೀಗ ಮೂರನೇ ಬಾರಿ ಹೋರಾಟಕ್ಕೆ ಇಳಿದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post