ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಡೀ ವಿಶ್ವವನ್ನೇ ತಲ್ಲಣಿಸುವಂತೆ ಮಾಡಿದ ಚೀನಾ #China ಮೂಲದ ಕೊರೋನಾ ನಂತರ ಅದೇ ದೇಶದಲ್ಲಿ ಈಗ ನೂತನ ವೈರಸ್’ವೊಂದು #Virus ಸ್ಪೋಟಗೊಂಡಿದ್ದು, ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆತಂಕ ಮೂಡಿಸಿದೆ.
ಎಚ್’ಎಂಪಿವಿ #HMPV ಎಂಬ ಹೆಸರಿನ ವೈರಸ್ ಚೀನಾದಲ್ಲಿ ಸ್ಪೋಟಗೊಂಡಿದ್ದು, ಇಡೀ ದೇಶ ಆತಂಕದಲ್ಲಿ ಮುಳುಗಿದೆ.
ದಿನೇ ದಿನೇ ಆ ದೇಶದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅತ್ಯಂತ ವೇಗದಲ್ಲಿ ಇದು ಹರಡುತ್ತಿದೆ ಎಂದು ವರದಿಯಾಗಿದೆ.
ಎಚ್ಚೆತ್ತ ಭಾರತ ಸರ್ಕಾರ ಹೇಳಿದ್ದೇನು?
ಇಡೀ ವಿಶ್ವದ ದೊಡ್ಡ ರಾಷ್ಟ್ರಗಳನ್ನೇ ಹಿಂಡಿ ಹಿಪ್ಪೆ ಮಾಡಿದ್ದ ಕೊರೋನಾವನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದ ಭಾರತ ಸರ್ಕಾರ, #IndianGovernment ಈಗ ಚೀನಾದಲ್ಲಿ ಸ್ಪೋಟಗೊಂಡಿರುವ ನೂತನ ವೈರಸ್ ಕುರಿತಾಗಿ ಈಗಲೇ ಮುನ್ನೆಚ್ಚರಿಕೆ ಕೈಗೊಂಡಿದೆ.
ಈ ಕುರಿತಂತೆ ಆರೋಗ್ಯ ಇಲಾಖೆ ಡೈರೆಕ್ಟರ್ ಜನರಲ್ ಅತುಲ್ ಗೋಯಲ್ ಹಲವರ ಆತಂಕ್ಕೆ ಉತ್ತರ ನೀಡಿದ್ದು, ಚೀನಾದ ಎಚ್’ಎಂಪಿವಿ #HMPV ವೈರಸ್’ಗೆ ಯಾರೂ ಆತಂಕ ಪಡಬೇಕಿಲ್ಲ ಎಂದಿದ್ದಾರೆ.
ಇಷ್ಟೇ ಅಲ್ಲ ಭಾರತದಲ್ಲಿ ಇದುವರೆಗೂ ಈ ವೈರಸ್ #Virus ಪತ್ತೆಯಾಗಿಲ್ಲ. ಇಷ್ಟೇ ಅಲ್ಲ ಸದ್ಯ ಪರಿಸ್ಥಿತಿ ಭಾರತದಲ್ಲಿ ಯಾವುದೇ ಆತಂಕ ಪರಿಸ್ಥತಿ ಸೃಷ್ಟಿಸಿಲ್ಲ ಎಂದಿದ್ದಾರೆ.ಭಾರತದಲ್ಲಿ ಈ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಚಳಿಗಾಲದಲ್ಲಿ ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾರತದ ಆರೋಗ್ಯ ವಿಭಾಗ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಹೀಗಾಗಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಉಸಿರಾಟದ ಸೋಂಕುಗಳ ವಿರುದ್ಧ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಸಾಕು ಎಂದಿದ್ದಾರೆ.
ಚೀನಾದಲ್ಲಿ ಕಾಣಿಸಿಕೊಂಡಿರುವ ವೈರಸ್ ಮೇಲೆ ಭಾರತ ತೀವ್ರ ನಿಗಾ ವಹಿಸಲಿದೆ. ಈ ಕುರಿತು ಅಂತಾರಾಷ್ಟ್ರೀಯ ಆರೋಗ್ಯ ಏಜೆನ್ಸಿಗಳ ಜೊತೆ ಸಂಪರ್ಕದಲ್ಲಿದೆ. ವೈರಸ್ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post