ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವರ್ಧಮಾನರ ಜನುಮ ಜಯಂತಿ. ಜೈನ ಧರ್ಮದ ಇಪ್ಪತ್ನಾಲ್ಕನೆಯ ತೀರ್ಥಂಕರರ ಜನುಮವೆತ್ತ ಶುಭ ಗಳಿಗೆ. ಕ್ರಿ.ಪೂ 599 ರಲ್ಲಿ ಲಿಚ್ಚಿವಿ ರಾಜವಂಶದ ವೈಶಾಲಿಯ ಕಿಚಲ್‌ಪುರದಲ್ಲಿ ಜನಿಸಿದರು. ಅವರ ತಂದೆ ಮಹಾರಾಜ ಸಿದ್ಧಾರ್ಥ ಮತ್ತು ತಾಯಿ ಮಹಾರಾಣಿ ತ್ರಿಶಾಲ. ಅವರ ಬಾಲ್ಯದ ಹೆಸರು ವರ್ಧಮಾನ. ಅವನ ಜನನದ ನಂತರ ರಾಜ್ಯವು ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂಬ ಭವಿಷ್ಯವನ್ನು ಕೇಳಿ ಅವರಿಗೆ ವರ್ಧಮಾನ ಎಂದು ನಾಮಕರಣ ಮಾಡಿದರು.
ಭಗವಾನ್ ಮಹಾವೀರರು ಹನ್ನೆರಡು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು. ಜಿನ ಎಂದರೆ ಇಂದ್ರಿಯಗಳನ್ನು ಜಯಿಸಿದವ. ಜಿನನ ಅನುಯಾಯಿಗಳನ್ನು ಜೈನರು ಎನ್ನುತ್ತಾರೆ. ಭಗವಾನ್ ಮಹಾವೀರನ ಜನನದ ಮೊದಲು ಅವರ ತಾಯಿ ತ್ರಿಶಾಲಾ ಅವರಿಗೆ 16 ಶುಭ ಕನಸುಗಳ ಕಂಡರು. ಅವರ ಕನಸಿನಲ್ಲಿ ನಾಲ್ಕು ಹಲ್ಲಿನ ಆನೆ, ಬಿಳಿ ವೃಷಭ, ಸಿಂಹ, ಸಿಂಹಾಸನದ ಮೇಲೆ ಲಕ್ಷ್ಮಿ, ಎರಡು ಹೂಮಾಲೆಗಳು, ಹುಣ್ಣಿಮೆ, ಸೂರ್ಯ, ಎರಡು ಚಿನ್ನದ ಚಿತಾಭಸ್ಮ, ಸಮುದ್ರ, ಸರೋವರ, ಚಿನ್ನದ ಹೊದಿಕೆಯ ಸಿಂಹಾಸನ ಇತ್ಯಾದಿಗಳಿದ್ದವು. ಇದರರ್ಥ ಅವರ ಮಗನು ಧರ್ಮದ ಪ್ರವರ್ತಕ, ಸತ್ಯದ ಪ್ರಚಾರಕ, ವಿಶ್ವ ಗುರು, ಜ್ಞಾನವನ್ನು ಸಾಧಿಸುವವನು ಮತ್ತು ಇತರ ಚಿಹ್ನೆಗಳು. ಇವೇ ಷೋಡಷ ಸ್ವಪ್ನಗಳು. ಇದಿಷ್ಟು ಮಹಾವೀರರ ಸಂಕ್ಷಿಪ್ತ ಇತಿಹಾಸ.
ಕೊರೋನಾ ವೈರಸ್ ಕುರಿತಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ಆಚರಣೆಗಳಿಗೆ ಬೀಗ ಬಿದ್ದಂತಾಗಿದೆ. ಮೊದಲೆಲ್ಲ ಜೈನ ಬಂಧುಗಳು ಬಸದಿಗಳಲ್ಲಿ ಸೇರಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು, ಧಾರ್ಮಿಕ ಚಿಂತನೆಗಳು ಜರುಗುತ್ತಿದ್ದವು. ಪೂಜೆ ಪುನಸ್ಕಾರ ಸಲ್ಲಿಸಿದ ನಂತರ ಅಲ್ಲಿಯೇ ಭೋಜನ ವ್ಯವಸ್ಥೆ ಮಾಡಲಾಗುತ್ತಿತ್ತು.
ಅಲ್ಲದೇ ಸಮೀಪದ ವಿದ್ಯಾರ್ಥಿ ನಿಲಯಗಳಿಗೆ ಆಹಾರ ವಿತರಣೆ, ಆಸ್ಪತ್ರೆಗಳಿಗೆ ಹಣ್ಣು ಹಂಪಲುಗಳನ್ನು ನೀಡುವುದು, ನಂತರದಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಕಾರ್ಯಕ್ರಮ ನಡೆಸುತ್ತಿದ್ದರು. ಆದರೆ ಲಾಕ್ ಡೌನ್ ಇರುವ ಕಾರಣ ಈ ಬಾರಿ ಮಹಾವೀರರ ಜಯಂತಿಯನ್ನು ಮನೆಗಳಲ್ಲಿಯೇ ಆಚರಿಸುವಂತಾಗಿದೆ.
ದಯೆಯನ್ನೇ ಧರ್ಮ ಎಂದುಕೊಂಡ ಜಿನ ಧರ್ಮ ಬೇಡುವುದೊಂದೇ ಜಗತ್ತು ಈ ಸಮಸ್ಯೆ ಮೀರಿ ಬರಲಿ. ಎಲ್ಲೆಡೆಯೂ ಖುಷಿ, ಆರೋಗ್ಯ ಹರಡಲಿ. ಧರ್ಮದ ತತ್ವವೇ ಅಂತಿದೆ ಬದುಕು, ಬದುಕಗೊಡು. ಬ್ರಹ್ಮಚರ್ಯ, ಮೋಕ್ಷ, ಅಹಿಂಸೆ, ಸಸ್ಯಾಹಾರ ಮತ್ತು ಸತ್ಯ ಇನ್ನಿತರ ಸನಾತನ ಮೌಲ್ಯಗಳಿಗೆ ಜೈನ ಧರ್ಮ ಕೊಟ್ಟಷ್ಟು ಪ್ರಾಮುಖ್ಯತೆ ಇನ್ನಾವ ಧರ್ಮವೂ ನೀಡಿಲ್ಲ.
ಕೊಲ್ಲೆನ್ನದ ಧಮ್ಮ ಯಾವುದಯ್ಯ
ಆತ್ಮ ಶುದ್ಧಿಯ ಮಾರ್ಗವೆಲ್ಲಿಹುದಯ್ಯ
ಮಿಥ್ಯೆಗೆ ಅಲ್ಲಿ ತಾವೇ ಇಲ್ಲವಯ್ಯ
ಅದು ಮೋಕ್ಷ ವೀರ ಮಹಾವೀರರ ಪಂಥ ಕಾಣ ಜಿನನಾಥ
Get in Touch With Us info@kalpa.news Whatsapp: 9481252093
Discussion about this post