ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಾವಣಗೆರೆ: ಜಿಲ್ಲೆಯ ಜನತೆ ಕೊರೋನಾ ಸುಳಿಯಲ್ಲಿ, ಅ’ಮಂಗಳ’ವಾಗಿ ಕಾಡಿದ್ದು, ಇಂದು ಒಂದೇ ದಿನ 22 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಇದುವರೆಗೂ 106 ಸಕ್ರಿಯ ಪ್ರಕರಣಗಳಿದ್ದು, ಇಂದು 647 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು 732 ವರದಿಗಳು ನೆಗೆಟಿವ್ ಎಂದು ಬಂದಿದ್ದು ಇಲ್ಲಿಯವರೆಗೆ 3149 ನೆಗೆಟಿವ್ ಎಂದು ವರದಿ ಬಂದಿದೆ. ಒಟ್ಟು 1430 ವರದಿಗಳು ಬರುವುದು ಬಾಕಿ ಇದೆ. 585, 616, 635 ಮೂರು ಜನ ಶಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇಂದು ಪತ್ತೆಯಾದ ಸೋಂಕಿತರ ಸಂಖ್ಯೆ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಹಾಕಿದೆ. ಈಗಾಗಲೇ ರಾಜ್ಯ ಸರ್ಕಾರ ಲಾಕ್ ಟೌನ್’ನ್ನು ಸಡಿಲಗೊಳಿಸಿದ್ದು ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಸಾಧ್ಯವಾದಷ್ಟು ಜನರು ಇನ್ನು ಸ್ವಲ್ಪ ದಿನ ಮನೆಯಲ್ಲಿರುವುದು ಒಳಿತು. ಹೊರಗೆ ಬರುವ ಅನಿವಾರ್ಯ ಇದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರದಲ್ಲಿ ಅಗತ್ಯ ವಸ್ತುಗಳನ್ನು ಪಡೆದು ಆದಷ್ಟು ಬೇಗ ಮನೆ ಸೇರುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಹತ್ತು ವರ್ಷದ ಒಳಗಿನ ಮಕ್ಕಳನ್ನು ವಿನಾಕಾರಣ ಹೊರಗಡೆ ಕರೆದುಕೊಂಡು ಬರಲು ಹೋಗಬೇಡಿ ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಇರುವ ಅತ್ಯುತ್ತಮ ಮಾರ್ಗ ಎಂದರೆ ಸಾಮಾಜಿಕ ಅಂತರದಲ್ಲಿ ಮಾಸ್ಕ್ ಧರಿಸಿ ಮನೆಯಲ್ಲೇ ಇರುವುದು ಎಂದು ಜನರಿಗೆ ಕರೆ ನೀಡಿದ್ದಾರೆ.
(ವರದಿ: ಪ್ರಕಾಶ ಮಂದಾರ)
Get in Touch With Us info@kalpa.news Whatsapp: 9481252093
Discussion about this post