ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‍ನಲ್ಲಿ ಸ್ಯಾಂಡಲ್ ವುಡ್‍ನಲ್ಲಿ ಸೆನ್ಸೇಷನ್ ಸೃಷ್ಠಿಸಲು ಇಂದಿನಿಂ ಆರಂಭವಾಗಿದೆ ರವಿಚಂದ್ರ…
ಹೌದು… ರವಿಚಂದ್ರನ್ ಹಾಗೂ ಉಪೇಂದ್ರ ಕಾಂಬಿನೇಷನ್‍ನಲ್ಲಿ ಮೂಡಿಬರಲಿರುವ ರವಿಚಂದ್ರ ಚಿತ್ರಕ್ಕೆ ಬಸವನ ಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ಇಂದು ಮುಹೂರ್ತ ನೆರವೇರಿಸಲಾಯಿತು. ಸ್ವತಃ ರವಿಚಂದ್ರ ಚಿತ್ರಕ್ಕೆ ಕ್ಲಾಪ್ ಮಾಡಿದರು.
ರವಿಚಂದ್ರ ಚಿತ್ರದ ಮೊದಲ ಸ್ಟಿಲ್‍ಗಳು ಕಲ್ಪ ನ್ಯೂಸ್‍ನಲ್ಲಿ ಮಾತ್ರ ಎಕ್ಸ್ ಕ್ಲೂಸಿವ್ ಆಗಿ ದೊರಕಿದ್ದು, ಇವು ಚಿತ್ರದ ಕುರಿತಾಗಿ ಅಪಾರವಾದ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಗಾಂಧಿನಗರದಲ್ಲಿ ಹವಾ ಸೃಷ್ಠಿಸುವುದು ನಿಶ್ಚಿತವಾಗಿದೆ.
ಯಶಸ್ವಿ ನಿರ್ದೇಶಕ ಓಂಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳಲಿದ್ದು, ಆರ್.ಎಸ್. ಪ್ರೊಡಕ್ಷನ್ ಅಡಿಯಲ್ಲಿ ಆರ್. ಶ್ರೀನಿವಾಸ್ ನಿರ್ಮಾಣ ಮಾಡಲಿದ್ದಾರೆ.
ಸಾನ್ವಿ ಶ್ರೀವಾಸ್ತವ್ ಚಿತ್ರದ ನಾಯಕಿಯಾಗಿದ್ದು, ಅರ್ಜುನ್ ಜನ್ಯ ಅವರ ಸಂಗೀತವಿದೆ.
ಎಕ್ಸ್ ಕ್ಲೂಸಿವ್ ಫೋಟೋಗಳನ್ನು ನೋಡಿ:
Discussion about this post