ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆಟ ಆಡಿಸುವ ನೆಪದಲ್ಲಿ 4 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಬ್ಬರು ಅತ್ಯಾಚಾರ #Rape ನಡೆಸಿರುವ ಆಘಾತಕಾರಿ ಘಟನೆ ಛತ್ತೀಸ್’ಘಡದ ನಾರಾಯಣಪುರದಲ್ಲಿ ನಡೆದಿದೆ.
ಕೃತ್ಯ ಎಸಗಿದ 10 ಮತ್ತು 13 ವರ್ಷದ ಇಬ್ಬರು ಬಾಲಾಪರಾಧಿಗಳನ್ನು #JuvenileOffender ಕೋತ್ವಳಿ ಪೊಲೀಸರು ಬಂಧಿಸಿದ್ದಾರೆ.
Also Read>> ಸಿಗಂದೂರು ಸಂಕ್ರಮಣ ಜಾತ್ರಾ ಮಹೋತ್ಸವ | ಹರಿದು ಬಂದ ಭಕ್ತಸಾಗರ | ತುಂಬಿ ತುಳುಕಿದ ಲಾಂಚ್
ಬಾಲಕಿ #Girl ದೇಹದಲ್ಲಿ ಏಕಾಏಕಿ ಅನಾರೋಗ್ಯ ಉಲ್ಬಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಆರೋಪಿಗಳಲ್ಲಿ ಒಬ್ಬನ ಕುಟುಂಬ ಬಾಲಕಿಯ ಕುಟುಂಬದ ಬಾಡಿಗೆದಾರರು ಮತ್ತು ಇನ್ನೊಬ್ಬ ಆಕೆಯ ನೆರೆಹೊರೆಯವನು ಎಂದು ತಿಳಿದುಬಂದಿದೆ.
ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಆಟವಾಡುವುದಕ್ಕೆ ಹೊರಗೆ ಬಿಟ್ಟಿದ್ದಾರೆ. ಈ ವೇಳೆ 5ನೇ ಮತ್ತು 8ನೇ ತರಗತಿ ಓದುತ್ತಿದ್ದ ಇಬ್ಬರು ಬಾಲಕರು 4 ವರ್ಷದ ಬಾಲಕಿಯನ್ನು ಆಟವಾಡೋಣ ಬಾ ಎಂದು ಕರೆದುಕೊಂಡು ಹೋಗಿದ್ದಾರೆ. ಆರಂಭದಲ್ಲಿ ಮೈದಾನದಲ್ಲಿ ಆಟವಾಡುತ್ತಿದ್ದುದನ್ನು ಬಾಲಕಿಯ ಅಮ್ಮ ಕೂಡ ನೋಡಿದ್ದಾರೆ. ಇದಾದ ನಂತರ ಬಾಲಕಿಯನ್ನು ಹೊಲದ ಬಳಿ ಆಟವಾಡಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕಿಯ ಮೇಲೆ ಇಬ್ಬರೂ ಬಾಲಕರು ಅತ್ಯಾಚಾರ ಮಾಡಿದ್ದಾರೆ.
ಇನ್ನು ಬಾಲಕಿ ಅಳುತ್ತಾ ಮನೆಗೆ ಬಂದಾಗ ಆಕೆಯ ಗುಪ್ತಾಂಗದಲ್ಲಿ ನೋವು ಉಂಟಾಗಿದ್ದು, ಏನಾದರೂ ತಗುಲಿ ಗಾಯವಾಗಿರಬಹುದು ಎಂದು ಕೂಡಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಇದಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದಾಗ ವೈದ್ಯರು ಬಾಲಕಿಯ ಪೋಷಕರ ಬಳಿ ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಏನಾಗಿದೆ? ಹೇಗೆ ಆಗಿದೆ ಗೊತ್ತಿಲ್ಲವೆಂದು ಹೇಳಿದ್ದಾರೆ. ಆಗ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ದೃಢಪಟ್ಟಿದೆ. ನಂತರ, ಆಸ್ಪತ್ರೆಯವರೇ ಪೊಲೀಸರಿಗೆ ಬಾಲಕಿಯ ಮೇಲೆ ಅತ್ಯಾಚಾರ ನಡೆದ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ವೈದ್ಯರ ಪರೀಕ್ಷಾ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಗ್ಯದಲ್ಲಿ ಸುಧಾರಿಸಿಕೊಂಡ ಬಾಲಕಿಯನ್ನು ವಿಚಾರಣೆ ಮಾಡಿದಾಗ ಘಟನೆಯ ಬಗ್ಗೆ ಹಾಗೂ ಅತ್ಯಾಚಾರ ಮಾಡಿದ ಬಾಲಕರ ಹೆಸರನ್ನು ಹೇಳಿದ್ದಾಳೆ. ಆಗ ಪೊಲೀಸರು ಗ್ರಾಮಕ್ಕೆ ತೆರಳಿ ಇಬ್ಬರೂ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರೂ ಬಾಲಕರ ವಿರುದ್ಧ ಪೋಕ್ಸೋ ಕೇಸ್ ಕೂಡ ದಾಖಲಿಸಿಕೊಂಡಿದ್ದು, ಬಾಲಕರನ್ನು ಬಾಲಾಪರಾಧಿಗಳು ಎಂದು ಪರಿಗಣಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post