ಕಲ್ಪ ಮೀಡಿಯಾ ಹೌಸ್ | ಕಾನ್ಫುರ |
22 ವರ್ಷದ ಯುವಕನೊಬ್ಬ 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ #Rape ಎಸಗಿರುವ ಭೀಕರ ಘಟನೆ ಇಲ್ಲಿನ ಬಿಲ್ಹಾಪುರದಲ್ಲಿ ನಡೆದಿದೆ.
ಆರೋಪಿಯನ್ನು ಅಮಿತ್ ಗೌತಮ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿ, ನ್ಯಾಯಾಲಯಕ್ಕೆ #Court ಹಾಜರುಪಡಿಸಲಾಗಿದೆ.

ಅಜ್ಜಿ ಕೂಗಿಕೊಳ್ಳುತ್ತಿದ್ದಂತೆಯೇ ಆರೋಪಿ ಗೋಡೆ ಹಾರಿ ಪರಾರಿಯಾಗಿದ್ದಾನೆ. ಅಜ್ಜಿಯು ಯುವಕನ ಸಂಬಂಧಿಯೇ ಆಗಬೇಕಿದ್ದು, ಒಂದೇ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 325(ಸುಖಾಸುಮ್ಮನೆ ನೋವುಂಟು ಮಾಡಿದ್ದಕ್ಕೆ ಶಿಕ್ಷೆ), 452 (ಒಬ್ಬರಿಗೆ ತೊಂದರೆ ಕೊಡಲು ಸಜ್ಜಾಗಿ ಮನೆಗೆ ನುಗ್ಗಿ ಬರುವುದು)ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post