ಚಿತ್ರದುರ್ಗ: ಪತಿಯೇ ತನ್ನ ಪತ್ನಿಯನ್ನು ವೇಲಿನಿಂದ ಉಸಿರುಗಟ್ಟಿಸಿ, ಆಕೆ ಅಸ್ವಸ್ಥಗೊಂಡ ನಂತರ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಧಾರುಣ ಘಟನೆ ನಡೆದಿದೆ.
ಹೊಸದುರ್ಗ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಶುಭಾ(27) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಪತಿ ಕರಿಯಪ್ಪ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಮಹಿಳೆಯ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ, ಪತ್ನಿಗೆ ಶೀಲ ಶಂಕಿಸಿ ಪತಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಸುರೇಶ್ ಬೆಳಗೆರೆ, ಚಿತ್ರದುರ್ಗ)
Discussion about this post