ಬೆಂಗಳೂರು: ಕಳೆದ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ ಇಂಡಿಯಾ ಪ್ರತಿ ವರ್ಷವೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಈ ಬಾರಿ ಮೂವರು ಯುವಕರು ಹಾಗೂ ಯುವತಿಯರು ತಮ್ಮ ಮುಡಿಗೆ ಕಿರೀಟ ಏರಿಸಿಕೊಂಡಿದ್ದಾರೆ.
ಈ ಬಾರಿಯ ಫ್ಯಾಷನ್ ಶೋ ಗೋಕುಲ ಎಕ್ಸ್ಟೆನ್ಷನ್‌ನಲ್ಲಿರುವ ಗೋಕುಲ ಗ್ರ‍್ಯಾಂಡ್ ಹೋಟೆಲ್ ಮತ್ತಿಕೆರೆ(ಯಶವಂತಪುರ) ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ಆಯೋಜಕ ರವಿ ಸತತವಾಗಿ ಹತ್ತು ವರ್ಷಗಳಿಂದ ಸಿಲ್ವರ್ ಸ್ಟಾರ್ಸ್ ಸಂಸ್ಥೆಯೂ ಚಿತ್ರರಂಗಕ್ಕೆ ಹಾಗೂ ಫ್ಯಾಷನ್ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 2019ರ ಮೊದಲ ಫ್ಯಾಷನ್ ಶೋ ಇದಾಗಿದ್ದೂ, ವರ್ಷಾಂತ್ಯದ ಒಳಗೆ ನಾಲ್ಕಕ್ಕೂ ಅಧಿಕ ಫ್ಯಾಷನ್ ಶೋಗಳನ್ನು ಆಯೋಜಿಸಲಿದ್ದೇವೆ ನಮ್ಮಲ್ಲಿ ಗೆದ್ದಂತಹ ಮಾಡೆಲ್’ಗಳಿಗೆ ಸಿನಿಮಾ ಮಾಡುವ ಯೋಜನೆಯನ್ನು ಹೊಂದಿದ್ದೇವೆ ಎಂದರು.
ಈ ಬಾರಿಯೂ ನವಯುಗದ 2019ರ ಮೊದಲನೆಯ ಬೆಂಗಳೂರಿನ ಫ್ಯಾಷನ್ ಶೋ ಇದಾಗಿದ್ದೂ ಇದರಲ್ಲಿ 16 ಯುವತಿಯರು 13 ಯುವಕರು ಸ್ಪರ್ಧಿಯಾಗಿದ್ದರು. ಈ 29ರಲ್ಲಿ ಸ್ಪರ್ಧಿಗಳಲ್ಲಿ ಯುವತಿಯರ ತಂಡದಿಂದ 3 ಹಾಗೂ ಯುವಕರ ತಂಡದಿಂದ 3 ಸೂಪರ್ ಮಾಡೆಲ್‌ಳು ತಮ್ಮ ಮುಡಿಗೆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಸಂಭ್ರಮದಲ್ಲಿ ನಟ ಯಶಸ್ ಸೂರ್ಯ, ನಟಿ ಸಾಕ್ಷಿ, ನಟ ಸಂಚಾರಿ ವಿಜಯ್, ನಟ ಧನು ಗೌಡ, ನಟಿ ನಿಮಿಕಾ ರತ್ನಾಕರ್, ಶುಭಾ ರಕ್ಷಾ, ನಿರ್ದೇಶಕಿ ರಿಶಿಕಾ ಶರ್ಮ, ನಟ ನಿಹಾಲ್, ಕಲಾವಿದ ರವಿ ರೆಡ್ಡಿ ಹಾಗೂ ರಾಣಿ ರಿಯಾ, ಸೇರಿದಂತೆ ಮುಂತಾದವರು ಭಾಗವಸಿದ್ದರು.
ಯುವತಿಯರು
ವಿನ್ನರ್: ಅಸ್ಮಿತಾ ಸಿಂಗ್-ಮಿಸ್ ಇಂಡಿಯಾ ಸೂಪರ್ ಮಾಡೆಲ್-2019 ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ರಿಮ್‌ಜಿಂಮ್ ಗುಪ್ತ- ಫಸ್ಟ್ ರನ್ನರ್ ಅಪ್
ಸಪ್ನ ಸಿಂಗ್ -ಸೆಕೆಂಡ್ ರನ್ನರ್ ಅಪ್
ಯುವಕರು
ಜಗದೀಶ್-ಮಿಸ್ಟರ್ ಇಂಡಿಯಾ ಸೂಪರ್ ಮಾಡೆಲ್-2019 ಆಗಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಅಭಿಷೇಕ್ -ಫಸ್ಟ್ ರನ್ನರ್ ಅಪ್
ವಿಕ್ರಮ್-ಸೆಕೆಂಡ್ ರನ್ನರ್ ಅಪ್
Discussion about this post