ಸೋಮವಾರಪೇಟೆ: ಹಿಂದೂ ಹುಡುಗಿಯರ ಮೈಯನ್ನು ಯಾರಾದರೂ ಮುಟ್ಟಿದರೆ ಅಂತಹವರ ಕೈಗಳನ್ನು ಕಡಿಯಿರಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ಸೋಮವಾರಪೇಟೆಯ ಮಾದಾಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಾ ಕೇಂದ್ರ ಸಚಿವ ಹೆಗಡೆ ಈ ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ತಮ್ಮ ಭಾಷಣದುದ್ದಕ್ಕೂ ರೋಷಭರಿತ ಮಾತುಗಳನ್ನು ಆಡಿರುವ ಹೆಗಡೆ ಅವರು, ಕಮ್ಯುನಿಷ್ಟರು ಸಮಾಜಕ್ಕೆ ಹಿಡಿದಿರುವ ದೊಡ್ಡ ಗೆದ್ದಲು.. ಎಂದು ತಮ್ಮ ಆಕ್ರೋಶವನ್ನು ಅವರು ಹೊರ ಹಾಕಿದ್ದಾರೆ ಎಂದು ವರದಿಯಾಗಿದೆ.
ದೇವರಿಗೂ ಸಹ ಬಲಿಷ್ಠ ಪ್ರಾಣಿಗಳನ್ನು ಯಾವತ್ತೂ ಬಲಿ ಕೊಡುವುದಿಲ್ಲ, ಸಾಧು ಪ್ರಾಣಿಗಳನ್ನು ಮಾತ್ರವೇ ಬಲಿ ಕೊಡುವುದು. ಹಾಗಾಗಿ ನಾವು ಸಮಾಜದಲ್ಲಿ ಬಲಿಷ್ಠರಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ನುಡಿದರು. ಇತಿಹಾಸವನ್ನು ನಾವೀಗ ಬರೆಯುತ್ತೇವೆ, ನಾವು ಬರೆದದ್ದೇ ಇತಿಹಾಸ ಎಂದು ಹೆಗಡೆ ಸಭೆಯ ಕರಾಡತನದ ನಡುವೆ ಹೇಳಿದ್ದಾರೆ ಎಂದು ವರದಿಯಾಗಿದೆ.
Discussion about this post