ಅರುಣೋದಯ ಹೋ ಚುಕಾ ವೀರ,
ಅಬ ಕರ್ಮಕ್ಷೇತ್ರ ಮೇ ಜುಟ ಜಾಯೇಂ
ಅಪನೇ ಖೂನ ಪಸೀನೇ ದ್ವಾರಾ,
ನವಯುಗ ಧರತೀ ಪರ ಲಾಯೇಂ.
ಜನಸೇವೆಗೈಯಲು ರಾಜಕೀಯ ಬೇಕೆಂದೇನೂ ಇಲ್ಲ. ಸೇವೆಗೈಯುವವನಿಗೆ ರಾಜಕೀಯ ಅನಿವಾರ್ಯವೂ ಅಲ್ಲ. ರಾಜಕೀಯದಿಂದಲೇ ಎಲ್ಲವೂ ಅಲ್ಲ. ರಾಜಕೀಯದ ಹಿಂದೆ ಬೀಳುವ ಬದಲು ರಾಜಕೀಯವೇ ತನ್ನ ಹಿಂದೆ ಬರಲಿ. ಮನಸ್ಸಿದ್ದರೆ ಮಾರ್ಗವೂ ಇದೆ ಎಂಬ ಮಾತಿಗೆ ಸಾಕ್ಷಿಯಾಗಿ, ಅವಕಾಶಗಳ ಹುಡುಕಾಟದಲ್ಲಿಯೇ ಸಮಯ ಕಳೆಯುವ ಸಾಕಷ್ಟು ಜನರ ನಡುವೆ, ಇರುವ ಸಮಯವನ್ನು ಹೊಸ ಅವಕಾಶಗಳ ಸೃಷ್ಟಿಗೆ ವಿನಿಯೋಗಿಸಿ ಸಾರ್ಥಕತೆ ಪಡೆದ ನೂರಾರು ಉದಾಹರಣೆಗಳ ಸಾಲಿಗೆ ಇಂದು ಸೇರ್ಪಡೆಯಾದ ಮತ್ತೊಂದು ಉದಾಹರಣೆ, ಮಲೆನಾಡಿನ ನವ ಕುಡಿ ಡಿ.ಎಸ್. ಅರುಣ್.
ಮಾವಿನ ಮರದಲ್ಲಿ ಮಾವಲ್ಲದೇ ಮತ್ತೇನು ಬಿಡಬೇಕು? ಕುಟುಂಬದ ಹಿನ್ನೆಲೆಯೇ ಹೆಮ್ಮೆ ಪಡುವಂಥದ್ದು. ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯುಳ್ಳ, ಕಪ್ಪು ಚುಕ್ಕೆಗಳಿಲ್ಲದ ಹಿರಿಯ ಕುಟುಂಬವೊಂದರ ಕಿರಿಯ ಕುಡಿಯಾಗಿ ಬೆಳೆದು ಅಧಿಕಾರಕ್ಕಾಗಿ ಯಾವುದೇ ರಾಜಕೀಯ ಮಾಡದೇ, ರಾಜಕೀಯದಲ್ಲಿ ಲಾಭ ಮಾತ್ರ ಕಾಣುವ ವ್ಯವಸ್ಥೆಯ ನಡುವೆ ಲಾಭಿ ನಡೆಸದೇ ಲಭ್ಯ ಹುದ್ದೆಗಳನ್ನು ಪ್ರಭುದ್ದತೆಯಿಂದ ಅಲಂಕರಿಸಬಹುದು ಎಂದು ತೋರಿಸಿಕೊಟ್ಟ ಡಿ.ಎಸ್. ಅರುಣ್, ಮುಂದೆ ಮಾದರಿ ರಾಜಕಾರಣಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿರುತ್ತಾರೆ ಎಂದರೆ ಅದು ವಾಸ್ತವಕ್ಕೆ ಸನಿಹದ ಮಾತು.
ರಾಜ್ಯ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ, ವಿಧಾನಪರಿಷತ್ ಸಭಾಧ್ಯಕ್ಷರಾಗಿ ಇನ್ನಿತರೆ ಮಹತ್ತರ ಹುದ್ದೆಗಳನ್ನು ಅಲಂಕರಿಸಿ ನಿಷ್ಕಲ್ಮಷ ರಾಜಕೀಯಕ್ಕೆ ನೀರೆರೆದು ಪೋಷಿಸಿದ ತಂದೆ ಶ್ರೀ ಡಿ.ಎಚ್. ಶಂಕರಮೂರ್ತಿಯವರ ಸುಧೀರ್ಘ ರಾಜಕೀಯದ ನಂಟನ್ನು ಎಲ್ಲಿಯೂ ಬಳಸಿಕೊಳ್ಳದೇ ಸ್ವತಂತ್ರ ಅಸ್ತಿತ್ವ ರೂಪಿಸಿಕೊಂಡ ಯುವ ಉದ್ಯಮಿ, ರಾಜಕಾರಣಿ, ಸಮಾಜಸೇವಕ, ಕ್ರಿಕೆಟರ್ ಡಿ.ಎಸ್. ಅರುಣ್ ಯುವಪೀಳಿಗೆಗೆ ಮಾದರಿಯೆನಿಸಿದ್ದಾರೆ.
ನೆರೆಯವನನ್ನು ನೂಕಿ ನಾಯಕನಾಗುವುದು ರಾಜಕೀಯವಲ್ಲ. ’ಇರುವರೆಲ್ಲರನು ಒಗ್ಗೂಡಿಸಿ ಒಟ್ಟಿಗೆ ಸಾಗುವೆನೆನುವವನು ನಿಜ ನಾಯಕ’ ಎಂಬ ಅಸಾಧ್ಯದ ಮಾತು ಇಂದಿನ ರಾಜಕೀಯಕ್ಕೆ ಸಾಧ್ಯವಿಲ್ಲವೆನಿಸಿದರೂ, ಸದ್ದಿಲ್ಲದೇ ಅಸಾಧ್ಯವನು ಸಾಧ್ಯವಾಗಿಸುವ ಸಿದ್ದ ಸೂತ್ರವನು ಹೊಂದಿದವನಂತೆ ಸಾಧಿಸಿದ ಕೀರ್ತಿ ಡಿ.ಎಸ್. ಅರುಣ್ ಎಂಬ ಮೌನ ಸಾಧಕನನ್ನು ಸಮಾಜಕ್ಕೆ ಪರಿಚಯಿಸಿತ್ತು. ಪ್ರತಿಷ್ಠಿತ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ಸಂಘದ ರೂವಾರಿಯಾಗಿ ಸಂಘವನ್ನು ಎರಡು ವರ್ಷಗಳ ಅವಧಿಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದು ನಗರದ ವಾಣಿಜ್ಯೋದ್ಯಮದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ತೋರಿದ ಕಳಕಳಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಕನಸಿನ ಮುನ್ನುಡಿಯಾಗಿ ನಗರದ ಸ್ವಚ್ಛತೆಯ ದೂರದೃಷ್ಟಿ ಹೊಂದಿ ಘನತ್ಯಾಜ್ಯ ವಿಲೇವಾರಿಯಂತಹ ಉತ್ತರವಿಲ್ಲದ ಕ್ಲಿಷ್ಠ ಸಮಸ್ಯೆಗೂ ಪರಿಹಾರಾರಾರ್ಥಕವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ, ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಮೂಲಕ ರಾಜ್ಯದಲ್ಲಿಯೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅರುಣ್ ಎಲ್ಲಿಯೂ ಇದು ತನ್ನ ಸಾಧನೆಯೆನ್ನದೇ ತಂಡದ ಸಾದನೆ ಎಂದಿದ್ದು ಅವರಲ್ಲಿನ ಉತ್ತಮ ನಾಯಕತ್ವ ಗುಣವನ್ನು ಬಿಂಬಿಸುತ್ತಿತ್ತು.
ಶಿವಮೊಗ್ಗೆಯ ಬಹುವರ್ಷಗಳ ಬೇಡಿಕೆಯಾಗಿದ್ದ ಪಾಸ್ ಪೋರ್ಟ್ ಸೇವಾಕೇಂದ್ರ ಎಲ್ಲರ ಕನಸಾಗಿತ್ತು. ಆದರೆ ಕನಸು ನನಸಾಗಿಸುವ ಸಾಹಸಕ್ಕೆ ಚಾಲನೆ ಕೊಟ್ಟು ಬಿತ್ತ ಕನಸಿನ ಬೀಜಕ್ಕೆ ನೀರೆರೆಯುತ್ತ ಬಂದ ಅರುಣ್ ಅದು ಫಲ ಕೊಡುವ ಸಮಯ ಬಂದಾಗ ಆ ಸಾಧನೆಯ ಹಿರಿಮೆ ತನಗೆ ಸೇರಬೇಕೆಂದು ಎಲ್ಲೂ ಹಾತೊರೆಯದೇ ಇದ್ದ ಪ್ರಬುದ್ದತೆ ಅವರ ಬಗೆಗಿನ ಗೌರವ ಭಾವನೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. ಇದೀಗ ಸೇವಾಕೇಂದ್ರ ಪ್ರಾರಂಭವಾಗಿ ವರ್ಷಗಳು ಕಳೆದು ಸಾವಿರಾರು ಜನರು ಪಡೆದ ಪ್ರಯೋಜನದ ಪಾಲುದಾರನೆನಿಸಿದರೂ ಶಿವಮೊಗ್ಗೆಯ ಅಭಿವೃದ್ಧಿಗೆ ಅದು ತನ್ನ ಅಳಿಲು ಸೇವೆ ಎನ್ನುತ್ತಾರೆ.
ಪಾಲಿಕೆಗೆ ಕಗ್ಗಂಟಾಗಿದ್ದ ಟ್ರೇಡ್ ಲೈಸೆನ್ಸ್ ವಿಚಾರದಲ್ಲಿ ಇದ್ದ ಅಡೆತಡೆಗಳ ನಿವಾರಣೆಗೆ ಪಾಲಿಕೆಯೊಂದಿಗೆ ಶ್ರಮ ವಹಿಸಿ ನಿಯಮಗಳನ್ನು ಸರಳೀಕರಿಸಲು ನೀಡಿದ ಸಹಕಾರ, ಕಲ್ಲೂರು ಮಂಡ್ಲಿ ಕೈಗಾರಿಕಾ ವಸಾಹತು ಪ್ರದೇಶದ ಹಲವು ಮೂಲ ಸಮಸ್ಯೆಗಳಿಗೆ ಸರ್ಕಾರದ ವತಿಯಿಂದ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ, ಇತ್ಯಾದಿ ಹತ್ತು ಹಲವಾರು ಸಮಸ್ಯೆಗಳಿಗೆ, ಒಬ್ಬ ಶಾಸನಬದ್ದ ರಾಜಕಾರಣಿ ಮಾಡಬಹುದಾದ ಕೆಲಸಗಳನ್ನು ತಮ್ಮ ಕಾರ್ಯವ್ಯಾಪ್ತಿಯ ಅಡಿಯಲ್ಲಿಯೇ ನಿರ್ವಹಿಸಬಹುದಾದ ಸಾಧ್ಯತೆಗಳ ಮೂಲಕ ಮಾದರಿ ಎನಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷನಾಗಿ ಅಭೂತಪೂರ್ವ ಯಶಸ್ಸು ಸಾಧಿಸಿದ ಶ್ರೇಯಸ್ಸನ್ನು ತಮ್ಮ ತಂಡಕ್ಕೆ ಸಮರ್ಪಿಸಿ ನಿರ್ಗಮಿಸಿದ ನಂತರದಲ್ಲಿ ಈವರೆಗೂ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆಯ ಮೂಲಕ ಚುನಾವಣೆಗಳ ಅನಗತ್ಯತೆಯನ್ನು ಸಾರುತ್ತಾ ಹೊಸ ಸಂಪ್ರದಾಯದ ಹುಟ್ಟಿಗೆ ಕಾರಣರಾಗಿ ಅವಿರೋಧ ಆಯ್ಕೆಗಳ ಸರದಾರನೆನಿಸಿಕೊಂಡಿದ್ದಾರೆ ಡಿ.ಎಸ್. ಅರುಣ್.

ಪ್ರತಿಷ್ಠಿತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಶಿವಮೊಗ್ಗ ವಿಭಾಗದ ರಾಯಭಾರಿಯಾಗಿ ಅವಿರೋಧ ಆಯ್ಕೆಯ ಮೂಲಕ ಮತ್ತೊಮ್ಮೆ ಹೆಸರು ಮಾಡಿ ಶಿವಮೊಗ್ಗದ ಕೀರ್ತಿ ಪತಾಕೆಯನ್ನು ಹಾರಿಸಿ ಕ್ರೀಡಾಕ್ಷೇತ್ರದಲ್ಲಿ ಸಫಲತೆ ತೋರಿ ಸಾಧನೆಗೆ ಅಣಿಯಾಗಿದ್ದಾರೆ ಅರುಣ್.
ನಗರದ ಪ್ರತಿಷ್ಠಿತ ಕಂಟ್ರಿ ಕ್ಲಬ್ ನ ಅವಿರೋಧ ಅದ್ಯಕ್ಷರಾಗಿ ಸತತ ಮೂರನೇ ಅವಧಿಗೆ ಮುಂದುವರೆದು ಸಂಸ್ಥೆಯ ಬೆಳವಣಿಗೆಗೆ ಆದ್ಯತೆ ನೀಡಿ ನುಡಿದಂತೆ ನಡೆಯುವ ಸನ್ಮಿತ್ರ ಎಂದು ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೈಶ್ಯ ಸಮುದಾಯದ ಪ್ರತಿಷ್ಠಿತ ಆರ್ಯವೈಶ್ಯ ಮಹಾಜನ ಸಮಿತಿಗೆ ಅವಿರೋಧ ಅಧ್ಯಕ್ಷರಾಗಿ ಆಯ್ಕೆಗೊಂಡ ಹೊಸ್ತಿಲಲ್ಲಿಯೇ ಶಿವಮೊಗ್ಗಕ್ಕೆ ಮಹಾಮಾರಿಯಂತೆ ಬಂದೆರಗಿದ ಮಹಾನೆರೆ ಸೃಷ್ಟಿಸಿದ್ದ ಅನಾಹುತಗಳಿಗೆ ಮಿಡಿದು ಸರ್ಕಾರದ ಅನುದಾನಕ್ಕೆ ಕಾಯದೇ ತಕ್ಷಣವೇ ಹಾನಿಗೊಳಗಾದ 50ಕ್ಕೂ ಹೆಚ್ಚು ಸಂತ್ರಸ್ತರನ್ನು ಭೇಟಿ ಮಾಡಿ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳ ಅನುದಾನವನ್ನು ನೀಡುವುದರೊಂದಿಗೆ ನೊಂದವರ ಬಾಳಿನ ಆಪದ್ಬಾಂಧವ ಎನಿಸಿದ್ದಾರೆ. ಅವರ ಸಾಧನೆಗಳ ಹಿರಿಮೆಯೊಂದಿಗೆ ಶಿವಮೊಗ್ಗದ ಮುಕುಟಕ್ಕೆ ಮತ್ತೊಂದು ಗರಿ ಸೇರಿದ್ದು ಶಿವಮೊಗ್ಗೆಯ ಹೆಮ್ಮೆಯೇ ಎನ್ನಬಹುದು.

ಕರ್ನಾಟಕ ಸರ್ಕಾರದಿಂದ ಆರ್ಯವೈಶ್ಯ ಅಭಿವೃದ್ಧಿ ನಿಗಮದ ರಾಜ್ಯಾದ್ಯಕ್ಷರಾಗಿ ಸಚಿವ ಸ್ಥಾನಮಾನದದೊಂದಿಗೆ ಅಧಿಕಾರ ವಹಿಸಿಕೊಂಡು ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಕಟಿಬದ್ದರಾಗಿ ದುಡಿಯಲು ಕಂಕಣ ತೊಟ್ಟು ನಿಂತಿರುವ ಡಿ.ಎಸ್. ಅರುಣ್ ಪ್ರಬುದ್ದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಹಾಗೂ ಎಲ್ಲ ಸಾರ್ವಜನಿಕ ರಂಗಗಳಲ್ಲಿ ತಮ್ಮ ಛಾಪು ಮೂಡಿಸಿ ಭವಿಷ್ಯದ ನಾಯಕನಾಗಿ ಹೊರಹೊಮ್ಮುವ ಸಕಲ ಗುಣಗಳನ್ನು ಹೊಂದುವ ಮೂಲಕ ಶಿವಮೊಗ್ಗೆಯ ಜನರಲ್ಲಿ ಹೊಸ ಆಶಾಭಾವನೆಯ ಅರುಣೋದಯದ ಆಶಾ ಕಿರಣವನ್ನು ಮೂಡಿಸಿದ್ದಾರೆ.









Discussion about this post