ಕಲ್ಪ ಮೀಡಿಯಾ ಹೌಸ್
ದಕ್ಷಿಣ ಕನ್ನಡ: ಕೊರೋನಾ 3ನೆಯ ಅಲೆಯ ಆತಂಕದ ನಡುವೆಯೇ ಶ್ರಾವಣ ಮಾಸ ಆರಂಭವಾಗಿದ್ದು, ಇಂದು ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಸರಳವಾಗಿ ನಾಗರ ಪಂಚಮಿ ಆಚರಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕರಾವಳಿ ಭಾಗದಲ್ಲಿ ನಾಗಾರಾಧನೆಗೆ ಅತ್ಯಂತ ಹೆಚ್ಚು ಪ್ರಾಮುಖ್ಯತೆಯಿದೆ. ಆಗುಂಬೆ ಘಟ್ಟ ಇಳಿದ ನಂತರ ಹಲವಾರು ಪ್ರದೇಶಗಳಲ್ಲಿ ನಾಗ ದೇವರ ಬನಗಳಿವೆ. ಈ ಪ್ರದೇಶ ಮಾತ್ರವಲ್ಲದೇ ಇಡಿಯ ಕರಾವಳಿಯಲ್ಲಿ ವ್ಯಾಪಿಸಿರುವ ಅರಣ್ಯಪ್ರದೇಶದಲ್ಲಿ ಬಹಳಷ್ಟು ನಾಗ ದೇವರ ಬನಗಳಿದ್ದು, ಇಲ್ಲೆಲ್ಲಾ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ವಿಶಿಷ್ಠವಾಗಿ ನಾಗರಾಧನೆ ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ನಾಡು ಗ್ರಾಮದ ಕುಂಟ್ರಕಲ ಕುಟುಂಬಿಕರ ನಾಗದೇವರಿಗೆ ನಾಗರ ಪಂಚಮಿ ಆಚರಣೆ ಜರುಗಿತು. ಮುಂಜಾನೆಯಿಂದಲೇ ವಿಶೇಷ ಅಭಿಶೇಕ, ಪೂಜೆಯನ್ನು ತುಳುನಾಡ ಸಂಪ್ರದಾಯದಂತೆ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post