ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ಹಿಜಾಬ್ Hijab ವಿವಾದಕ್ಕೆ ಸಂಬಂಧಿಸಿದಂತೆ ಹಲವು ಎಚ್ಚರಿಕೆಯ ನಂತರವೂ ಸೂಚನೆ ಪಾಲಿಸದ ಆರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರು ಸಮವಸ್ತ್ರ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ. ಈ ಕುರಿತಂತೆ ಸರಿಪಡಿಸಿಕೊಳ್ಳುವಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ, ಕ್ಯಾರೆ ಅನ್ನದ ಆರು ವಿದ್ಯಾರ್ಥಿನಿಯರನ್ನು ಅಮಾನತು ಮಾಡುವ ಕಠಿಣ ನಿರ್ಧಾರಕ್ಕೆ ಪ್ರಾಂಶುಪಾಲರು ಬಂದಿದ್ದಾರೆ. ಅಲ್ಲದೆ ಹಿಜಾಬ್ ಧರಿಸಿ ಬಂದ 12 ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿ ವಾಪಾಸ್ ಕಳುಹಿಸಲಾಗಿದೆ. ಅಮಾನತುಗೊಂಡ ಆರು ವಿದ್ಯಾರ್ಥಿನಿಯರಿಗೆ ಹೈಕೋರ್ಟ್ ಹಾಗೂ ಸರ್ಕಾರದ ಆದೇಶವನ್ನು ಪಾಲಿಸುವಂತೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ಬಹಳಷ್ಟು ಬಾರಿ ಸೂಚಿಸಿತ್ತು. ಆದರೆ, ನಿರಂತರವಾಗಿ ಅವರು ಇದನ್ನು ಉಲ್ಲಂಘಿಸುತ್ತಲೇ ಬಂದಿದ್ದಾರೆ. ಇನ್ನು ಮಂಗಳೂರು ವಿಶ್ವವಿದ್ಯಾಲಯದ ಹಂಪನಕಟ್ಟೆ ಕಾಲೇಜಿಗೆ ನಿಯಮಾವಳಿ ಉಲ್ಲಂಘಿಸಿ ಹಿಜಾಬ್ ಧರಿಸಿ ಆಗಮಿಸಿದ್ದ ೧೨ ವಿದ್ಯಾರ್ಥಿನಿಯರನ್ನು ವಾಪಾಸ್ ಕಳುಹಿಸಲಾಗಿದೆ.
ವಿವಿ ಸಿಂಡಿಕೇಟ್ ನಿರ್ಧಾರದಂತೆ ಇಲ್ಲಿನ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ. ಈ ನಿಯಮ ಪಾಲಿಸಿ ಹಿಜಾಬ್ ತೆಗೆದಿರಿಸಿ ತರಗತಿ ಪ್ರವೇಶಿಸಿ ಎಂದು ಪ್ರಾಂಶುಪಾಲರು ಸೂಚನೆ ನೀಡಿದರೂ, ವಿದ್ಯಾರ್ಥಿನಿಯರು ಪರಿಗಣೀಸಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿನಿಯರನ್ನು ವಾಪಾಸ್ ಕಳುಹಿಸಲಾಗಿದೆ. ಆ ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ ಧರಿಸುವಂತೆ ಅವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
Also read: ಚಂದ್ರಗುತ್ತಿ: ಷರತ್ತುಬದ್ಧ ನಿಯಮಾನುಸಾರ ಗಣಿಗಾರಿಕೆಗೆ ಅವಕಾಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post