ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ಪ್ರಸಾದ್ ಆಚಾರ್ಯ ಕೈಂತಿಲ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಶ್ರೀ ಉಮಾಮಹೇಶ್ವರ Shri Umamaheshwara ದೇವರ ಭಕ್ತಿಗೀತೆ ವೀಡಿಯೋ “shutterup films” youtube channelನಲ್ಲಿ ಮೇ 2 ರಂದು ಶ್ರೀ ಉಮಾಮಹೇಶ್ವರ ದೇವರ ದಿವ್ಯ ಸನ್ನಿಧಿಯಲ್ಲಿ ಬಿಡುಗಡೆಗೊಳ್ಳಲಿದೆ ಹಾಗೂ ಪ್ರತಿಷ್ಠಾ ದಿನ ಅಂಗವಾಗಿ ದೇವಸ್ಥಾನದಲ್ಲಿ ಶತರುದ್ರಾಭಿಷೇಕವು ಜರುಗಲಿದೆ ಎಂದು “shutterup films” creations ತಂಡದ ಪ್ರಮುಖರು ತಿಳಿಸಿದ್ದಾರೆ.
Also read: ಏ.22ರಂದು ಕಮಠಾಣಾದಲ್ಲಿ ಜನತಾ ಜಲಧಾರೆ ಕಾರ್ಯಕ್ರಮ: ಶಾಸಕ ಖಾಶೆಂಪುರ್ ಸಿದ್ಧತೆ ಪರಿಶೀಲನೆ
ವಿಟ್ಲ ಅರಮನೆಯ ಕೆ. ಕೃಷ್ಣಯ್ಯ ಇವರ ಶುಭ ಆಶೀರ್ವಾದಗಳೊಂದಿಗೆ “Shutterup films” ಅರ್ಪಿಸುವ “ಧರೆಯಾಳೋ ಸ್ವಾಮಿ ನೀನೇ…” ಭಕ್ತಿಗೀತೆಗೆ ಕಾರ್ತಿಕ್ ಆಚಾರ್ಯ ಕೈಂತಿಲ ಸಾಹಿತ್ಯ ಬರೆದಿದ್ದಾರೆ. ಮಾನಸ ಆಚಾರ್ಯ ಕಲ್ಲಡ್ಕ ಇವರ ಮಧುರವಾದ ಧ್ವನಿಯಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ಭರತನಾಟ್ಯ ವಿಧುಷಿ ಕಾವ್ಯಶ್ರೀ ಅಡ್ಡಾಳಿ ಇವರು ಹೆಜ್ಜೆ ಹಾಕಿದ್ದಾರೆ ಹಾಗೂ ಡ್ಯಾನ್ಸರ್ ಮೋನಿಷ್ ಹಾಗು 200ಕ್ಕೂ ಹೆಚ್ಚೂ ವೇದಿಕೆಗಳಲ್ಲಿ ಅಭಿನಯಿಸಿದ ಬಾಲಪ್ರತಿಭೆ ಪ್ರಾಪ್ತಿ ಮಾಮೆಶ್ವರ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post