ಮುಂಬೈ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದು ಅತ್ಯಂತ ವಿಚಿತ್ರ ಹಾಗೂ ವಿಭಿನ್ನ ಪ್ರಕರಣ..
ಮುಂಬೈನಲ್ಲಿ ಲೋಕಲ್ ರೈಲು ಸಂಚರಿಸುವನ ಹಳಿಯೊಂದು ಹಾನಿಗೊಳಗಾಗಿತ್ತು. ಆದರೆ, ಇದನ್ನು ತುರ್ತಾಗಿ ಸರಿಪಡಿಸಲು ಸಮಯ ಇಲ್ಲದ್ದರಿಂದ, ಆ ಹಳಿಗೆ ಬಟ್ಟೆ ತುಂಡೊಂದನ್ನು ಕಟ್ಟಿ, ರೈಲು ಸಂಚಿಸಲು ಅನುವು ಮಾಡಿಕೊಟ್ಟ ಘಟನೆ ನಡೆದಿದೆ.
ಮಳೆಗಾಲದಲ್ಲಿ ಮುಂಬೈ ರೈಲ್ವೆಯ ಹಳಿಗಳು ಪ್ರತಿವರ್ಷವೂ ಮುಳುಗಿಹೋಗುವ ಜೊತೆಯಲ್ಲಿ ಹಾನಿಗೀಡಾಗುತ್ತವೆ. ಇದನ್ನು ತಪ್ಪಿಸಲು ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ಮುಂಬೈ ಹೈಕೋರ್ಟ್ ಚಾಟಿ ಬೀಸಿದ ಒಂದು ದಿನದ ಒಳಗಾಗಿಯೇ ಮನ್ಖರ್ಡ್ ರೈಲು ನಿಲ್ದಾಣ ಬಳಿ ಈ ಘಟನೆ ನಡೆದಿದೆ.
Discussion about this post