ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ವಸತಿ ಶಾಲೆಯ ಕಾಂಪೌಂಡ್ ಹತ್ತುವ ವೇಳೆ ಜಾರಿ ಬಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಹರಿಹರದಲ್ಲಿ ನಡೆದಿದೆ.
ಇಲ್ಲಿನ ಖಾಸಗಿ ಪಬ್ಲಿಕ್ ವಸತಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಮೃತ ವಿದ್ಯಾರ್ಥಿನಿಯನ್ನು ಸಿನಿಕ್ಷಾ(16) ಎಂದು ಗುರುತಿಸಲಾಗಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಮೂಲದ ವಿದ್ಯಾರ್ಥಿನಿ ಸಿನಿಕ್ಷಾ ನಾಲ್ಕು ದಿನಗಳ ಹಿಂದೆಯಷ್ಟೇ ವಸತಿ ಶಾಲೆಗೆ ಸೇರಿದ್ದಳು. ಮಂಗಳವಾರ ರಾತ್ರಿ 11.30ರ ವೇಳೆಯಲ್ಲಿ ವಸತಿ ಶಾಲೆಯ ಕಾಂಪೌAಡ್ ಹತ್ತುವ ವೇಳೆ ಜಾರಿ ಬಿದ್ದಿದ್ದಾಳೆ.
Also read: ದೇಹ-ಮನಸ್ಸನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕೆ ಮಾತ್ರ: ನರೇಂದ್ರ ಕಾಮತ್ ಅಭಿಮತ
ಘಟನೆಯಿಂದ ತೀವ್ರವಾಗಿ ಗಾಯಗೊಂಡ ಆಕೆಯಲ್ಲಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಕೊನೆಯುಸಿರೆಳೆದಿದ್ದಾಳೆ.
ಆದರೆ, ಆಕೆ ರಾತ್ರಿ ವೇಳೆಯಲ್ಲಿ ಕಾಂಪೌಂಡ್ ಹತ್ತಿದ್ದು ಯಾಕೆ ಎಂಬ ಕುರಿತಾಗಿ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post