ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಜಿಲ್ಲಾ ಆರೋಗ್ಯಾಧಿಕಾರಿ ಆರೋಗ್ಯ ಕೇಂದ್ರವೊಂದರ ಮೇಲ್ಚಾವಣಿ ಸೋರುತ್ತಿದ್ದ ಕಾಮಗಾರಿಯನ್ನು ಬದಲಾಯಿಸಿ, ಆಂಬುಲೆನ್ಸ್ ಶೆಡ್ ನಿರ್ಮಿಸುವ ಕಾಮಗಾರಿಗೆ ಬದಲಾಯಿಸಿಕೊಳ್ಳಲಾಗಿದೆ ಎಂದಾಗ, ಉಸ್ತುವಾರಿ ಕಾರ್ಯದರ್ಶಿಗಳು ಜನರ ಆರೋಗ್ಯ ಕಾಪಾಡುವ ಆಸ್ಪತ್ರೆ ಮುಖ್ಯವೋ ಇಲ್ಲ ಆಂಬುಲೆನ್ಸ್ ಶೆಡ್ ಮುಖ್ಯವೋ? ಇದೊಂದು ರೀತಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿಯುವ ಪ್ರಯತ್ನ, ಯಾವುದೇ ಕಾರಣಕ್ಕೂ ಆಸ್ಪತ್ರೆ ದುರಸ್ಥಿ ನಿಲ್ಲಬಾರದು, ಆಂಬುಲೆನ್ಸ್ ಖರೀದಿಸಲು ಹಣವಿದೆ, ಶೆಡ್‍ಗೆ ಹಣವಿಲ್ಲವೇ, ಮೊದಲ ಆದ್ಯತೆ ಆಸ್ಪತ್ರೆ ರಿಪೇರಿಗೆ ಕೊಡಿ ಜನರ ಆರೋಗ್ಯ ಕಾಪಾಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಹಾಗೂ ಜಿ.ಪಂ. ಆಡಳಿತಾಧಿಕಾರಿ ಎಸ್.ಆರ್. ಉಮಾಶಂಕರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

Also read: ಮಳೆ ಹಾನಿ: ನ್ಯಾಯಯುತ ಪರಿಹಾರ ಒದಗಿಸಿ – ಕೇಂದ್ರ ತಂಡಕ್ಕೆ ಸಿಎಂ ಮನವಿ
ಶಿಕ್ಷಣ ಇಲಾಖೆಯಲ್ಲಿ ಬಿಸಿಯೂಟ ಕಾರ್ಯಕ್ರಮ ಸರಿಯಾಗಿ ನಡೆಯುತ್ತಿದೆಯೇ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಸರಿಯಾಗಿ ಆಗುತ್ತಿದೆಯೇ ಹಾಗೂ ಮೊಟ್ಟೆ ತನ್ನುವ ಮಕ್ಕಳ ಪ್ರಮಾಣ ಎಷ್ಟು ಎಂದಾಗ, ಅಕ್ಷರ ದಾಸೋಹ ಅಧಿಕಾರಿ ಶೇ.90 ರಷ್ಟು ಮಕ್ಕಳು ಮೊಟ್ಟೆ ತನ್ನುತ್ತಾರೆ ಎಂದರು. ಉಸ್ತುವಾರಿ ಕಾರ್ಯದರ್ಶಿಗಳು ದಾವಣಗೆರೆಯಂತಹ ಜಿಲ್ಲೆಯಲ್ಲಿ ಅಷ್ಟೊಂದು ಪ್ರಮಾಣದ ಮಕ್ಕಳು ಮೊಟ್ಟೆ ತನ್ನಲಿಕ್ಕಿಲ್ಲ ಸರಿಯಾಗಿ ಚೆಕ್ ಮಾಡಿ ಎಂದರು.

ಜವಳಿ ಕೈಮಗ್ಗ ಇಲಾಖೆ ಅಧಿಕಾರಿ ಈ ಬಾರಿಯ ದಸರಾ ಸ್ತಬ್ದ ಚಿತ್ರಕ್ಕೆ 21 ಲಕ್ಷ ನಿಗದಿಯಾಗಿದ್ದು ಜಿಲ್ಲೆಯ ಮೂರು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಅದರಲ್ಲಿ ಚನ್ನಗಿರಿಯ ಪುಷ್ಕರಣಿಯೂ ಒಂದು ಎಂದರು. ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ, ಪುಷ್ಕರಣಿ ಸ್ತಬ್ದ ಚಿತ್ರ ಒಳ್ಳೆಯ ಆಯ್ಕೆ ಎಂದರು.
ನಿಗದಿಪಡಿಸಿಕೊಂಡಿರುವ ಕಾಮಗಾರಿಗಳನ್ನು ಬೇಗ ಬೇಗ ಮುಗಿಸಿ, ಜಿಪಂ ಚುನಾವಣೆ ಯಾವಾಗ ಎಂದು ಗೊತ್ತಾಗುತ್ತಿಲ್ಲ, ಅನುದಾನ ಕೊನೇ ಕಂತಿನಲ್ಲಿ ಕಡಿತವಾಗಬಹುದು ಅಲ್ಲಿವರೆಗೂ ಕಾಯದೆ ಬೇಗ ಕೆಲಸಗಳನ್ನು ಮುಗಿಸಿ ಎಂದರು.

ಸಭೆಯಲ್ಲಿ ಜಿ.ಪಂ. ಸಿಇಒ ಡಾ.ಚೆನ್ನಪ್ಪ, ಮುಖ್ಯ ಲೆಕ್ಕಾಧಿಕಾರಿ ಸೌಮ್ಯಶ್ರೀ,ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.










Discussion about this post