ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಾವಣಗೆರೆ: ಕಳೆದ ಎರಡು ದಿನಗಳ ಹಿಂದೆ ಬೆಣ್ಣೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು.
ನರ್ಸ್ ಸಂಪರ್ಕದಿಂದ ಒಂದು ವರ್ಷದ ಮಗು ಸೇರಿದಂತೆ ಆರು ಮಂದಿಗೆ ಇಂದು ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಬೆಣ್ಣೆ ಜಾರಿ ಎಂಟು ಪಾಸಿಟಿವ್ ಕೊರೋನಾ ದಾವಣಗೆರೆ ಜಿಲ್ಲೆಗೆ ಬಿದ್ದಿದೆ. ಇದುವರೆಗೆ ಸೋಂಕಿತರ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ಹಳೆಯ ಎರಡು ಪ್ರಕರಣ ಸೇರಿಸಿದರೆ ಒಟ್ಟು ಜಿಲ್ಲೆಯಲ್ಲಿ ಹತ್ತು ಪ್ರಕರಣಗಳು ವರದಿಯಾದಂತೆ.
ಈ ಕುರಿತಂತೆ ಮಾಹಿತಿ ನೀಡಿದ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೋಂಕಿತ ನರ್ಸ್ ಸಂಪರ್ಕದಿಂದಾಗಿ ಅವರ 16 ವರ್ಷದ ಮಗನಿಗೂ ಕೊರೋನಾ ಸೋಂಕು ತಗುಲಿದೆ. ಜೊತೆಗೆ ಒಂದೇ ಕುಟುಂಬದ 5 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರ ಸಂಪರ್ಕದಲ್ಲಿದ್ದಂತ 34 ಜನರನ್ನು ಕ್ವಾರಂಟ್ಯೆನ್ ಮಾಡಲಾಯಿತು. ಇದೀಗ ಕೆಲವರು ಕೊರೋನಾ ಪರೀಕ್ಷೆ ಲ್ಯಾಬ್ ರಿಪೋರ್ಟ್ ಬಂದಿದೆ. ಅಲ್ಲದೆ ಇವರೊಂದಿಗೆ ಇವರ ಒಂದೇ ಕುಟುಂಬದ 6 ಜನರಿಗೆ ಕರೋನಾ ಸೋಂಕು ಪಾಸಿಟಿವ್ ಎಂಬುದಾಗಿ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಇದುವರೆಗೂ ರಾಜ್ಯದಾದ್ಯಂತ ಬೆಣ್ಣೆ ನಗರಿ ಎಂದು ಖ್ಯಾತಿ ಪಡೆದ ದಾವಣಗೆರೆ ಜಿಲ್ಲೆ ಕೊರೋನಾ ನಗರವಾಗಿ ಮಾರ್ಪಡುತ್ತಿರುವುದು ಜಿಲ್ಲೆಯ ಜನಸಾಮಾನ್ಯರಲ್ಲಿ ಹೊಸ ಆತಂಕ ಮನೆ ಮಾಡಿದೆ.
ಇನ್ನು ಮುಂದಾದರೂ ಜನರು ಎಚ್ಚೆತ್ತುಕೊಂಡು. ಸಾಮಾಜಿಕ ಅಂತರ ಕಾಪಾಡಿ, ಮನೆಯಲ್ಲಿ ಸುರಕ್ಷಿತವಾಗಿ ಇರಿ ಎಂಬುವರು ನಮ್ಮ ಕಳಕಳಿಯಾಗಿದೆ.
ವರದಿ: ಪ್ರಕಾಶ ಮಂದಾರ
Get in Touch With Us info@kalpa.news Whatsapp: 9481252093
Discussion about this post