ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಾವಣಗೆರೆ: ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ಮಡಿಲಿಗೆ ದಕ್ಕಿದ್ದು, ನೂತನ ಮೇಯರ್ ಆಗಿ ಎಸ್.ಟಿ. ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ ಒಂದು ತಿಂಗಳಿಂದಲೂ ತೀವ್ರ ಕುತೂಹಲ ಮೂಡಿಸಿದ್ದ ಪಾಲಿಕೆ ಮೇಯರ್ ಚುನಾವಣೆಗೆ ಕಾಂಗ್ರೆಸ್ ರಣತಂತ್ರ ರೂಪಿಸುವಲ್ಲಿ ವಿಫಲವಾದ ಪರಿಣಾಮ ಕೊನೆಗೂ ಬಿಜೆಪಿ ತೆಕ್ಕೆಗೆ ಸೇರಿದ್ದು, ಮತ್ತೊಮ್ಮೆ ಪಾಲಿಕೆಯಲ್ಲಿ ಕಮಲ ಅರಳಿದೆ.
ಕಾಂಗ್ರೆಸ್ ಸದಸ್ಯ ದೇವರಮನೆ ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಅನಿರೀಕ್ಷಿತ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ಬಲ ಕುಸಿತ ಕಂಡಿತು. ಶಾಸಕ, ಶಾಮನೂರು ಶಿವಶಂಕರಪ್ಪ, ಎಂಎಲ್ ಸಿ ರಘು ಆಚಾರ್, ಕೆ.ಸಿ. ಕೊಂಡಯ್ಯ, ಯು.ಬಿ. ವೆಂಕಟೇಶ ಸೇರಿ ನಾಲ್ಕು ಜನರು ಗೈರಾಗಿದ್ದು ಕಾಂಗ್ರೆಸ್ ಒಟ್ಟು 22 ಸದಸ್ಯರ ಮತಬಲವಿತ್ತು. ಬಿಜೆಪಿಯಿಂದ 29 ಸದಸ್ಯರ ಮತ ಸಂಖ್ಯೆಯಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post