ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ದಾವಣಗೆರೆ ಹಾಗೂ ಹರಿಹರದಿಂದ ಜೋಗ ಮತ್ತು ಶಿರಸಿಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆಯನ್ನು ಜುಲೈ 13 ರಿಂದ ಪ್ರತಿ ಶನಿವಾರ, ಭಾನುವಾರ, ರಜಾದಿನಗಳಂದು ಮಾಡಲಾಗಿದೆ.
ದಾವಣಗೆರೆ-ಶಿರಸಿ ಬೆಳಿಗ್ಗೆ 7 ಗಂಟೆಗೆ, ಶಿರಸಿ-ಜೋಗ ಮಧ್ಯಾಹ್ನ 12 ಗಂಟೆಗೆ, ಜೋಗ-ದಾವಣಗೆರೆ ಸಂಜೆ 4.30ಕ್ಕೆ ಇರುತ್ತದೆ.
ಈ ಕುರಿತಂತೆ ಮಾಹಿತಿ ಪ್ರಕಟಿಸಿರುವ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ ಎಫ್. ಬಸಾಪುರ, ಪ್ರಯಾಣದ ದರ 2 ಬದಿ ಸೇರಿ ಒಬ್ಬರಿಗೆ ರೂ.650, ಮಕ್ಕಳ ಪ್ರಯಾಣ ದರ ರೂ.500ನ್ನು ನಿಗಧಿಗೊಳಿಸಲಾಗಿದೆ. ಮುಂಗಡ ಬುಕ್ಕಿಂಗ್ ಕೌಂಟರ್ ಹಾಗೂ ಆನ್’ಲೈನ್ ಬುಕ್ಕಿಂಗ್ ksrtc.karnataka.gov.in ಮಾಡಬಹುದು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post