ಕಲ್ಪ ಮೀಡಿಯಾ ಹೌಸ್ | ದಾವಣಗೆರೆ(ಹರಿಹರ) |
ನವದೆಹಲಿಯಲ್ಲಿ ತೆರಿಗೆ ಹಂಚಿಕೆಯ ಬಗ್ಗೆ ರಾಜ್ಯದ ಪ್ರತಿಭಟನೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪವರು ಟೀಕಿಸಿರುವುದಕ್ಕೆ ಪ್ರತಿಕ್ರಯಿಸಿ, ರಾಜ್ಯಕ್ಕೆ ಕೇಂದ್ರದ ಅನ್ಯಾಯ ವಿರೋಧಿಸುವುದು ತಪ್ಪೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಪ್ರಶ್ನಿಸಿದರು.
ಹರಿಹರದಲ್ಲಿ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

Also read: ಯೋಗಿ ಆದಿತ್ಯನಾಥರೇ ನಂಬರ್ ಒನ್ ಮುಖ್ಯಮಂತ್ರಿ: ಟಾಪ್ 10ರಲ್ಲಿ ಕಾಂಗ್ರೆಸ್ ಸಿಎಂಗಳೇ ಇಲ್ಲ!
ರಾಜ್ಯ ಸರ್ಕಾರದಿಂದ 34 ಲಕ್ಷ ರೈತರಿಗೆ 650 ಕೋಟಿ ರೂ. ತಾತ್ಕಾಲಿಕ ಬರ ಪರಿಹಾರ ಬರನಿರ್ವಹಣೆಗೆ ಸರ್ಕಾರದ ಕ್ರಮಗಳ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಬರನಿರ್ವಹಣೆಯ ಕ್ರಮವಾಗಿ, ಕುಡಿಯುವ ನೀರು, ಮೇವು , ಉದ್ಯೋಗ ನೀಡಲಾಗುತ್ತಿದ್ದು, ಒಟ್ಟು 860 ಕೋಟಿ ರೂ.ಗಳನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಜನರು ಗುಳೇ ಹೋಗದಂತೆ ತಪ್ಪಿಸಲು ಹಾಗೂ ಅವರ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.

(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post