ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ Gruha Lakshmi Scheme ಜಿಲ್ಲೆಯಲ್ಲಿ ನಿನ್ನೆಯವರೆಗೂ ಒಟ್ಟು 1,10,000 ಫಲಾನುಭವಿಗಳ ನೋಂದಣಿಯಾಗಿದೆ.
ಈ ಕುರಿತಂತೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅವರು ಮಾಹಿತಿ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಅಂದಾಜು 4,50,000 ಫಲಾನುಭವಿಗಳಿದ್ದು, ಸುಮಾರು 1,10,000 ಫಲಾನುಭವಿಗಳ ನೊಂದಣಿ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಫಲಾನುಭವಿಗಳ ಅರ್ಜಿಗಳನ್ನು ಇನ್ನು ಒಂದು ವಾರದೊಳಗೆ ನೊಂದಣಿ ಮಾಡಲಾಗುತ್ತದೆ ಎಂದಿದ್ದಾರೆ.

Also read: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ದಾವಣಗೆರೆ: ಮಹಿಳಾ ನಿಲಯದ ಯುವತಿಯರಿಗೆ ಕಂಕಣ ಭಾಗ್ಯ
ಜಿಲ್ಲೆಯಾದ್ಯಂತ ಒಟ್ಟು 411 ನೊಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅರ್ಜಿ ಸಲ್ಲಿಸಲು ಯಾವುದೇ ಕಾಲ ಮಿತಿಯಿರುವುದಿಲ್ಲ ಹಾಗೂ ನೊಂದಣಿಗೆ ಶುಲ್ಕ ಪಾವತಿಸುವಂತಿಲ್ಲ. ಯಾವುದೇ ಕೇಂದ್ರಗಳಲ್ಲಿ ನೋಂದಾಯಿಸಲು ಹಣ ಕೇಳಿದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೋಲೀಸ್ ಠಾಣೆ ಅಥವಾ ತಹಶೀಲ್ದಾರರ ಕಚೇರಿ ಸಂಪರ್ಕಿಸಿ ದೂರು ಸಲ್ಲಿಸಲು ತಿಳಿಸಿದ್ದಾರೆ.










Discussion about this post