ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಪದೇ ಪದೇ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಅಶಾಂತಿ ಮೂಡಿಸುತ್ತಿರುವ ದೇಶ ದ್ರೋಹಿಗಳಿಗೆ ಮತದಾನದ ಹಕ್ಕು, ಬಿಪಿಎಲ್ ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ಮೊಟಕುಗೊಳಿಸಬೇಕೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ- ನ್ಯಾಮತಿ ವಿಧಾನಸಭೆ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ MP Renukacharya ಒತ್ತಾಯಿಸಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲ್ಲೂಕು ಕುಂಕುವ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಲ್ಲಿಯ ಅನ್ನ,ಗಾಳಿ, ನೀರು ಸೇವನೆ ಮಾಡಿ ಕೊನೆಗೆ ನಮ್ಮಲ್ಲೇ ವಿದ್ರೋಹಿ ಚಟುವಟಿಕೆಗಳನ್ನು ನಡೆಸುವವರಿಗೆ ಸುಮ್ಮನೆ ಬಿಡಬಾರದು. ಸರ್ಕಾರದ ಸವಲತ್ತುಗಳನ್ನು ಸಂಪೂರ್ಣವಾಗಿ ಹಿಂಪಡೆದಾಗಲೇ ಇವರು ಸರಿದಾರಿಗೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಮೌಲ್ವಿಗಳು ಎಲ್ಲಿಂದ ಬರುತ್ತಾರೆ, ಏನು ಮಾಡುತ್ತಾರೆ? ಇವರಿಗೆ ಆಶ್ರಯ ಕೊಡುವವರು ಯಾರು? , ಗುರುತಿನ ಚೀಟಿಯೂ ಇರುವುದಿಲ್ಲಘಿ, ಆಧಾರ್ ಕಾರ್ಡ್ ಇರುವುದಿಲ್ಲ. ಇಲ್ಲಿದ್ದುಕೊಂಡೇ ಕೊನೆಗೆ ಒಂದು ದಿನ ಬೆಂಕಿ ಹಚ್ಚಿ ಬೇರೆ ಕಡೆ ಪರಾರಿಯಾಗುತ್ತಾರೆ. ಇಂಥವರನ್ನು ಸರ್ಕಾರ ಗುರುತಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಕೆಜಿಹಳ್ಳಿ-ಡಿಜೆಹಳ್ಳಿಯಿಂದ ಆರಂಭವಾದ ಈ ಕೋಮುಗಲಭೆ ಈಗ ಹುಬ್ಬಳ್ಳಿ ತಲುಪಿದೆ. ಯಾರು ಇಂತಹ ಘಟನೆಗಳನ್ನು ಪದೇ ಪದೇ ಮಾಡುತ್ತಾರೋ ಅಂಥವರನ್ನು ಮುಲಾಜಿಲ್ಲದೆ ನೇಣಿಗೆ ಹಾಕಬೇಕು ಎಂದು ಆಗ್ರಹಿಸಿದರು.
ಇವರಿಗೆ ಅಂತಿಂಥ ಶಿಕ್ಷೆ ನೀಡಿದರೆ ಸರಿಯಾಗುವುದಿಲ್ಲ. ಕೋಮುಗಲಭೆ ನಡೆಸುವವರನ್ನು ಗಲ್ಲಿಗೆ ಹಾಕಿದಾಗ ಮಾತ್ರ ಮುಂದಿನವರಿಗೆ ಪಾಠವಾಗುತ್ತದೆ. ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಗಂಭೀರವಾಗಿ ಪರಿಗಣಿಸಲಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಕಾರಣ:
ಕಳೆದ ಶನಿವಾರ ಹಳೇಹುಬ್ಬಳ್ಳಿಯಲ್ಲಿ ನಡೆದಿರುವ ಕೋಮುಗಲಭೆಗೆ ಕಾಂಗ್ರೆಸ್ ನಾಯಕರ ಕುಮ್ಮಕು ಕಾರಣ. ಅಲ್ತಾಪ್ ಹಳ್ಳೂರ ಯಾವ ಪಕ್ಷಕ್ಕೆ ಸೇರಿದವನು ಎಂದು ಅವರು ಪ್ರಶ್ನಿಸಿದರು.
ಅಮಾಯಕ ಹುಡುಗನೊಬ್ಬ ವಾಟ್ಸಪ್‍ನಲ್ಲಿ ಬಂದ ಸ್ಟೇಟಸ್‍ನ್ನು ಹಾಕಿದ್ದಕ್ಕೆ ಗಲಭೆ ನಡೆಸುವ ಅವಶ್ಯಕತೆ ಇತ್ತೆ? ಮೌಲ್ವಿ ಮತ್ತು ಅಲ್ತಾಪ್ ಹಳ್ಳೂರ ಸೇರಿಕೊಂಡೇ ಜನರನ್ನುಪ್ರಚೋದಿಸಿದ್ದಾರೆ. ಕೇವಲ ಅರ್ಧಗಂಟೆಯೊಳಗೆ ಮೂರು ಟ್ರಾಕ್ಟರ್ ಲೋಡ್ ಕಲ್ಲುಗಳನ್ನು ಯಾವ ಕಾರಣಕ್ಕೆ ಸಂಗ್ರಹಿಸಲಾಗಿತ್ತು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ ನಡೆಸಲಾಗಿದೆ. ತಕ್ಷಣ ಬೇಷರತ್ತ್ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ನಾವು ದೇವಸ್ತಾನಕ್ಕೆ ಹೋದರೆ ನಮಗೆ ಆರತಿ ಎತ್ತಿ ಪ್ರಸಾದ ತೀರ್ಥ ನೀಡುತ್ತಾರೆ. ನಾಡಿನ ಒಳಿತು ಮತ್ತು ಜನರ ಹಿತಕ್ಕಾಗಿ ನಾವು ಪ್ರಾರ್ಥನೆ ಮಾಡುತ್ತೇವೆ. ಮಸೀದಿ ಮತ್ತು ಮದರಸಾಗಳಲ್ಲಿ ಇದನ್ನು ಕಾಣಲು ಸಾಧ್ಯವೇ ಎಂದು ಅನುಮಾನ ವ್ಯಕ್ತಪಡಿಸಿದರು.
ಮಸೀದಿ ಮತ್ತು ಮದಸರಗಳಲ್ಲಿ ಮದ್ದು, ಗುಂಡು ಸಂಗ್ರಹಣೆ ಮಾಡುತ್ತಾರೆ. ಮದರಸಾಗಳು ಶಿಕ್ಷಣ ನೀಡುವ ಬದಲು ಧರ್ಮ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿವೆ. ಮುಗ್ಗ ಮಕ್ಕಳ ಮನಸ್ಸನ್ನು ಮೌಲ್ವಿಗಳು ಹಾಳು ಮಾಡುತ್ತಿದ್ದಾರೆ. ತಕ್ಷಣವೇ ರಾಜ್ಯ ಸರ್ಕಾರ ಮದರಸಾ ಮತ್ತು ಮಸೀದಿಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ರೇಣುಕಾಚಾರ್ಯ ಒತ್ತಾಯಿಸಿದರು.
ಹಿಂದೆ ನಾನು ಇದನ್ನು ಹೇಳಿದ್ದಕ್ಕೆ ಕೆಲವರು ನನ್ನ ವಿರುದ್ದ ಪ್ರತಿಭಟನೆ ನಡೆಸಿದರು. ಈಗ ಹುಬ್ಬಳ್ಳಿಯಲ್ಲಿ ಸ್ವತಃ ಧರ್ಮ ಬೋಧನೆ ಮಾಡುವ ಮೌಲ್ವಿಯೇ ಇದರಲ್ಲಿ ಶಾಮೀಲಾಗಿದ್ದಾರೆ.ಬಂಧಿಸುವವರನ್ನು ಅಮಾಯಕರು ಎನ್ನುವ ಮಾಜಿ ಸಿ.ಎಂ ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.
ನಮ್ಮಲ್ಲಿ ಜಾತಿ, ಧರ್ಮ, ಬೇಧವಿಲ್ಲದೆ ಹಿಂದೂ ಮುಸ್ಲಿಂ ಎನ್ನದೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಿತ್ತಿ್ದೇವೆ. ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಿಮ್ಮ ಆಟ ನಡೆಯುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post