ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಆಗಸ್ಟ್ 13 ಮತ್ತು ಆ.14 ರಂದು ನಡೆದ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಮತ್ತು ದಾವಣಗೆರೆಯ ಶ್ರೀ ಸಾಹಿ ಫಿಟ್ನೆಸ್ ಇವರು ನಡೆಸಿದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಮುಕ್ತಿ ವಿ. 48 ಕೆಜಿ ವಿಭಾಗದಲ್ಲಿ 195 ಕೆಜಿ ಎತ್ತುವುದರ ಮೂಲಕ ಚಿನ್ನದ ಪದಕವನ್ನು ಗಳಿಸಿದ್ದಾರೆ.
ಸೌಂದರ್ಯ ರಾಯ್ಕರ್ ರವರು 64 ಕೆಜಿ ವಿಭಾಗದಲ್ಲಿ 170 ಕೆಜಿ ಎತ್ತುವುದರ ಮೂಲಕ ಚಿನ್ನದ ಪದಕವನ್ನು ಪಡೆದಿದ್ದಾರೆ. ಹಾಗೂ ಅನುಷ ಬಂಡಗಾರ್ 48 ಕೆಜಿ ವಿಭಾಗದಲ್ಲಿ 125 ಕೆಜಿ ಎತ್ತಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮತ್ತು ಅದಿತಿ.ಯು 58 ಕೆಜಿ ವಿಭಾಗದಲ್ಲಿ 125 ಕೆಜಿ ಎತ್ತಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮುಕ್ತಿ.ವಿ ಕರ್ನಾಟಕ ರಾಜ್ಯದ “strong women of karnataka” ಎಂಬ ಬಿರುದನ್ನು ಗಳಿಸಿ ಕಾಲೇಜಿನ ಮತ್ತು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

Also read: ಕುವೆಂಪು ವಿವಿಯಲ್ಲಿ ಸದ್ಭಾವನಾ ದಿನಾಚರಣೆ










Discussion about this post