ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಜಿಲ್ಲೆಯ ಹೂನ್ನೂರು ಗ್ರಾಮದ ಶ್ರೀ ಪಂಪಾರೂಢ ಗ್ರಾಮಾಂತರ ಪ್ರೌಢಶಾಲೆ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ, ಜಿಲ್ಲಾಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ.
ಪ್ರತಿ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾಗಹಿಸಲು ಶಾಲೆಯ ಮುಖ್ಯ ಶಿಕ್ಷಕಿ ಭರಮಸಾಗರದ ಬಿ. ಸುಜಾತಾ ಸುರೇಶ್, ಶಿಕ್ಷಕರು, ಸಾರ್ವಜನಿಕರು ಮಕ್ಕಳನ್ನು ಪ್ರೋತ್ಸಾಹಿಸಿ, ಪಂದ್ಯದಲ್ಲಿ ಸ್ಪರ್ಧಾತ್ಮಕವಾಗಿ ಆಟವ ಆಡಿ ಗೆಲುವನ್ನು ಸಾಧಿಸಲು ಬೇಕಾದ ಪೂರಕ ತಯಾರಿ ನಡೆಸಲು ಸಹಕರಿಸಿದ್ದ ಪರಿಣಾಮ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸ್ಪರ್ಧಾತ್ಮಕ ಆಟವಾಡಿ ಗೆಲುವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಲಾ ಅಭಿವೃದ್ಧಿ , ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆ ಅವರನ್ನು ಕ್ರೀಡಾ ಕ್ಷೇತ್ರ ಮಕ್ಕಳನ್ನು ಮೇಲೆ ತರುವಂತಹ ಕೆಲಸವನ್ನು ಮಾಡಿರುತ್ತಾರೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಸುಜಾತಾ ಅವರನ್ನು ಸನ್ಮಾನಿಸಿದೆ.

ಮುಖ್ಯ ಶಿಕ್ಷಕಿ ಸುಜಾತ ಗೆಲುವು ಸಾಧಿಸಿರುವ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post