ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಆ.14 ರಿಂದ ಪ್ರಾರಂಭವಾಗಲಿರುವ ದೇಶದ ಮೊಟ್ಟ ಮೊದಲ ಅಲ್ಟಿಮೇಟ್ ಖೋ-ಖೋ ಲೀಗ್ ಪಂದ್ಯಾವಳಿಗೆ ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳಾದ ಮಹಮ್ಮದ್ ತಾಸೀನ್ ಇವರು ರಾಜಸ್ಥಾನ ವಾರಿಯರ್ಸ್ ತಂಡಕ್ಕೆ ಮತ್ತು ವೇಣುಗೋಪಾಲ್.ಎಸ್ ಇವರು ಚೆನೈ ಕ್ವಿಕ್ ಗನ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಪಟುಗಳು ಇಲಾಖೆಯ ತರಬೇತುದಾರರಾದ ರಾಮಲಿಂಗಪ್ಪ.ಜೆ ಇವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಟಿಮೇಟ್ ಲೀಗ್‍ನಲ್ಲಿ ಪಾಲ್ಗೊಂಡಿರುವ ಮಹಮ್ಮದ್ ತಾಸೀನ್ ಮತ್ತು ವೇಣುಗೋಪಾಲ್ ಇವರು ಉತ್ತಮ ಪ್ರದರ್ಶನ ನೀಡಲೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ತರಬೇತುದಾರರು, ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.
Also read: ರಾಷ್ಟ್ರಮಟ್ಟದ ಜೆಇಇ ಪರೀಕ್ಷೆ: ತಿಮ್ಮಲಾಪುರ ಮೊರಾರ್ಜಿ ದೇಸಾಯಿ ಕಾಲೇಜಿನ 13 ವಿದ್ಯಾರ್ಥಿಗಳು ಉತ್ತೀರ್ಣ










Discussion about this post