ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಕೋವಿಡ್’ನಿಂದಾಗಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಜಿಲ್ಲೆಯ ನಾಲ್ವರು ಮಕ್ಕಳಿಗೆ ಪಿಎಂ ಕೇರ್ಸ್ ಫಂಡ್ ಫಾರ್ ಚಿಲ್ಡ್ರನ್ PM Cares Fund for Children ಯೋಜನೆಯಡಿಯಲ್ಲಿ ಸಹಾಯ ಮಾಡಲಾಗಿದೆ.
ಯೋಜನೆಯ ಅಡಿಯಲ್ಲಿ ಹೊನ್ನಾಳಿ ತಾಲೂಕಿನ ಎನ್. ಯುಕ್ತಿ, ಮಣಿಕಂಠ ಹಾಗೂ ದಾವಣಗೆರೆ ಸತೀಶ್, ರಮೇಶ್ ನಾಯ್ಕ್’ಗೆ 10 ಲಕ್ಷ ಬಾಂಡ್ ಪಡೆದ ಪಲಾನುಭವಿಗಳಾಗಿದ್ದಾರೆ.
ಅವರು 23 ವರ್ಷವಾದ ನಂತರ ಬಾಂಡ್ ಮೊತ್ತ ಆ ಮಕ್ಕಳಿಗೆ ಲಭ್ಯವಾಗಲಿದೆ. ಈ ಕುರಿತಂತೆ ಫಲಾನುಭವಿ ಬಾಲಕಿ ಯುಕ್ತಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದಿದ್ದು, ನಿಮ್ಮ ಜೊತೆ ಸರ್ಕಾರವಿದೆ. ನಿಮ್ಮ ಕುಟುಂಬದ ಜೊತೆ ನಾನಿದ್ದೇನೆ ಎಂದು ಅಭಯ ನೀಡಿದ್ದಾರೆ.
Also read: ಏನಿದು ಪಿಎಂ ಕೇರ್ಸ್ ಫಂಡ್ ಫಾರ್ ಚಿಲ್ಡ್ರನ್: ಯಾರಿಗೆ ಪ್ರಯೋಜನ? ಏನೆಲ್ಲಾ ಸಹಾಯ ದೊರೆಯುತ್ತದೆ? ಇಲ್ಲಿದೆ ಮಾಹಿತಿ
ನಿಮ್ಮ ಜೀವನದಲ್ಲಿ ಉಂಟಾಗಿರುವ ಶೂನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಆದರೆ ಒಂದು ಕುಟುಂಬವಾಗಿ ನಿಮ್ಮ ಹೋರಾಟಗಳು, ಕಷ್ಯಗಳು ಮತ್ತು ನಿಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನೀವು ಒಬ್ಬಂಟಿಯಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಇಡೀ ದೇಶವೇ ನಿಮ್ಮಂದಿಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post