ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘಟನೆ ಇಡಿಯ ದೇಶವನ್ನು ಒಮ್ಮೆ ತಲ್ಲಣಗೊಳಿಸಿದೆ. ಹೌದು, ನವದೆಹಲಿ ಗುರಾಡಿಯಲ್ಲಿ ಒಂದೇ ಕುಟುಂಬದ 11 ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇಲ್ಲಿನ ಸತೀಶ್ ನಗರದ ಸ್ಟ್ರೀಟ್ ನಂ. 2 ರಲ್ಲಿರುವ ಮನೆಯಲ್ಲಿ ಕುಟುಂಬವು ಆತ್ಮಹತ್ಯೆಗೆ ಶರಣಾಗಿದೆ. ಈ ಪ್ರದೇಶದಲ್ಲಿ ಸ್ಟ್ರೀಟ್ ನಂ. 10ರ ವರೆಗೂ ಜನರಲ್ಲಿ ಗಾಬರಿ ಸೃಷ್ಠಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಲಲಿತ್ ಭಾಟಿಯಾ ತಮ್ಮ ಡೈರಿಯಲ್ಲಿ ಅವರ ಕುಟುಂಬದವರು 11ನೆಯ ದಿನದಂದು ಹಿಂದಿರುಗುತ್ತಾರೆ ಎಂದು ಬರೆದಿದ್ದಾರೆ. ಇದರಿಂದ ಗಾಬರಿಗೊಂಡಿರುವ ಜನರು 2-3 ದಿನದಲ್ಲಿ ಈ ಪ್ರದೇಶದಲ್ಲಿ ಪೂಜೆ, ಹೋಮ-ಹವನ, ಭಗವತ್ ಗೀತೆ ಪಾರಾಯಣ ಮಾಡಲು ನಿರ್ಧರಿಸಿದ್ದಾರೆ. ಭಾಟಿಯಾ ಕುಟುಂಬದ ಈ ಮನೆಯಲ್ಲಿ ಈಗ ದೇವಾಲಯ ನಿರ್ಮಿಸಬೇಕು ಎಂದು ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕುಟುಂಬ ಅನುಸರಿಸಿದ ಆಚರಣೆಯೇ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಆದರೂ ಸಹ ಖಚಿತ ಕಾರಣವನ್ನು ತಿಳಿಯಲು ನಿರ್ಧರಿಸಿರುವ ಪೊಲೀಸರು, ಭಾಟಿಯಾ ಕುಟುಂಬದ 11 ಸದಸ್ಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕುಟುಂಬದ ಮನಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಮೃತ ದೇಹಗಳಿಗೆ ಮನೋವೈಜ್ಞಾನಿಕ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯು ಈ ರೀತಿಯ ಮರಣೋತ್ತರ ಪರೀಕ್ಷೆಯಲ್ಲಿ, ಕುಟುಂಬದ ಜೀವಂತ ಸದಸ್ಯರ ಮನಸ್ಥಿತಿ ಮತ್ತು ಸತ್ತವರ ಸ್ಥಿತಿಯನ್ನು ವ್ಯಾಪ್ ಮಾಡಲಾಗುವುದು ಎಂದಿದ್ದಾರೆ.
Discussion about this post