ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸ್ಮಾರ್ಟ್ ಸಿಟಿಗೆ ಶಿವಮೊಗ್ಗ ಘೋಷಣೆಯಾದ ಮೇಲೆ ಸಾಕಷ್ಟು ಬದಲಾವಣೆ ಮಾಡಲಾಗಿದೆ. ನಗರವನ್ನು ಅಭಿವೃದ್ಧಿಪಡಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ತ್ಯಾಜ್ಯ ವಿಲೇವಾರಿಯೋ ಒಂದಾಗಿದೆ. ಹೀಗೆ ಉನ್ನತ ಉನ್ನತ ಯೋಜನೆಗಳನ್ನು ಹಾಕಿಕೊಂಡು ಶಿವಮೊಗ್ಗ ನಗರ ತನ್ನದೆ ಆದ ಶ್ರೇಷ್ಠ ಸ್ಥಾನವನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಮುಖ್ಯವಾಗಿ ಪರಿಸರ ಸಂರಕ್ಷಿಸುವ ಉದ್ದೇಶದಿಂದ ಮಹಾನಗರ ಪಾಲಿಕೆಯು ತ್ಯಾಜ್ಯ ವಿಲೇವಾರಿ ಮಾಡುವ ಮಹತ್ತರವಾದ ಕಾರ್ಯವನ್ನು ಆರಂಭಿಸಿದೆ.
ನಮ್ಮ ಮಹಾನಗರಗಳಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಘನತ್ಯಾಜ್ಯಗಳು 162 ಟನ್‌ಗಳಷ್ಟು ತ್ಯಾಜ್ಯಗಳನ್ನು ಹಸಿ ಕಸ ಮತ್ತು ಒಣ ಕಸ ಹಾಗೂ ಬೇಡವಾದ ಕಸವೆಂದು ವಿಂಗಡಣೆ ಮಾಡಿ ಪಾಲಿಕೆಯ ತ್ಯಾಜ್ಯದ ಗಾಡಿಗೆ ನೀಡುವಂತೆ ಆದೇಶಿಸಿದೆ.
ಅಡುಗೆ ಮನೆ ಕಸ
ತರಕಾರಿ, ಹಣ್ಣುಗಳ ಸಿಪ್ಪೆಗಳು, ಉಳಿದ ಆಹಾರ ಪದಾರ್ಥಗಳು, ಮೊಟ್ಟೆಯ ಸಿಪ್ಪೆ, ಚಿಕನ್, ಮೀನು, ಮಾಂಸ ಮೂಳೆಗಳು, ಕೊಳೆತ ಹಣ್ಣುಗಳು ಮತ್ತು ತರಕಾರಿಗಳು, ಖ್ಯಾದ ಪದಾರ್ಥಗಳಿಗೆ ಅಂಟಿದ ಟಿಶ್ಯೂ ಪೇಪರ್ಸ್, ಚಹಾ, ಕಾಫಿ ಪುಡಿ ಹಾಗೂ ಟೀ ಬ್ಯಾಗ್’ಗಳು, ಬಾಲೆ ಎಲೆ, ದೊನ್ನೆ ಇತ್ಯಾದಿ.
ಪ್ಲಾಸ್ಟಿಕ್
(ಮಣ್ಣಾಗಿದ್ದರೆ ತೊಳೆಯಬೇಕು) ಪ್ಲಾಸ್ಟಿಕ್ ಕವರ್, ಬಾಟಲ್, ಡಬ್ಬಿಗಳು, ಮಿಠಾಯಿ ಹೊದಿಕೆಗಳು ಪ್ಲಾಸ್ಟಿಕ್ ಬಟ್ಟಲುಗಳು, ಹಾಲು ಮತ್ತು ಮೊಸರು ಪ್ಯಾಕೇಟ್‌ಗಳು.
ಕಾಗದ
ದಿನ ಪತ್ರಿಕೆ ಅಥವಾ ಇತರೆ ನಿಯತಕಾಲಿಕೆಗಳು, ಲೇಖನ ಸಾಮಾಗ್ರಿ, ಜಂಕ್ ಮೇಲ್ ರಟ್ಟಿನ ಡಬ್ಬಿಗಳು, ಫಿಜಾ ಡಬ್ಬಿಗಳು, ಟೆಟ್ರಾ ಪ್ಯಾಕ್, ಪೇಪರ್ ಬಟ್ಟಲುಗಳು, ಟೀ ಹಾಗೂ ನೀರಿನ ಪೇಪರ್ ಲೋಟಗಳು.
ಲೋಹಗಳು
ಲೋಹದ ಹಾಳೆಯ ಪಾತ್ರೆಗಳು ಅಥವಾ ಡಬ್ಬಿಗಳು ಮತ್ತು ತಗಡಿನ ಕ್ಯಾನುಗಳು ಹಾಗೂ ಗಜಿನ ಬಾಟಲಿಗಳು.
ಇತರೆ ಒಣ ಕಸ
ರಬ್ಬರ್, ಥರ್ಮೋಕೋಲ್, ಹಳೆ ಬಟ್ಟೆ, ಸ್ಪಾಂಜ್’ಗಳು, ಸೌಂದರ್ಯ ಪ್ರಸಾಧನಗಳು, ಸಿರಾಮಿಕ್, ಕಟ್ಟಿಗೆ ತುಣುಕುಗಳು, ತೆಂಗಿನ ಚಿಪ್ಪುಗಳು ಸೇರಿದಂತೆ ಬ್ಯಾಟರಿಗಳು, ಸಿಡಿಗಳು, ಟೇಪ್ಸ್, ಥರ್ಮಾಮೀಟರ್, ಬಲ್ಬ್, ಟ್ಯೂಬ್’ಗಳು ಮತ್ತು ಸಿಎಫ್’ಎಲ್ ಬಲ್ಬ್‌ಗಳು.
ಬೇಡವಾದ ಕಸ
ಡೈಪರ್ಸ್’ಗಳು, ಸ್ಯಾನಿಟರಿ ನ್ಯಾಪಕೀನ್ಸ್, ಬ್ಯಾಂಡೇಜ್, ಕಾಂಡೋಮ್, ಉಪಯೋಗಿಸಿದ ಟಿಶ್ಯುಗಳು, ಔಷಧಿಗಳು, ಗುಡಿಸಿದ ಧೂಳು ಮತ್ತು ಮಿಶ್ರಕಸ ಸೀಮಿತ ಪ್ರಮಾಣದಲ್ಲಿ ಆಗಿದೆ.
ಅತೀವವಾಗಿ ಮಣ್ಣಾದ ಪ್ಲಾಸ್ಟಿಕ್ ಅಥವಾ ಮಣ್ಣಾದ ಕಾಗದಗಳು ಹಾಗೂ ತೀಕ್ಷ್ಣ ಸಣ್ಣಪ್ರಮಾಣದಲ್ಲಿ ಮಾತ್ರ ಪತ್ರಿಕೆಯಲ್ಲಿ ಸುತ್ತಿ ಅದನ್ನು ಪ್ರತ್ಯೇಕವಾಗಿ ಒಪ್ಪಿಸಬೇಕು. ರೇಜರ್ಸ್, ಬ್ಲೇಡ್ಸ್ ಉಪಯೋಗಿಸಿದ ಸಿರಿಂಜುಗಳು ಇಂಜೆಕ್ಷನ್ ಟ್ಯೂಬ್‌ಗಳು. ನಿರ್ಮಾಣ ಅವಶೇಷಗಳು ಪ್ರತ್ಯೇಕವಾಗಿ ಬಪ್ಪಿಸಬೇಕು ರಬ್ಬರ್, ಪೇಂಟ್ಸ್, ಸಿಮೆಂಟ್, ಪುಡಿ, ಇಟ್ಟಿಗೆಗಳು, ಹೂವಿನ ಮಡಿಕೆಗಳು, ಹೂಳು ಒಡೆದ ಗಾಜುಗಳು ಮುಂತಾದ ಪ್ಲಾಸ್ಟಿಕ್ ಬೇರ್ಪಡಿಸಿ ಘನ ತ್ಯಾಜ್ಯಗಳು ಪ್ರತ್ಯೇಕವಾಗಿ ಮಾಡುವ ಕೆಲಸಗಳು ಕೂಡ ನಡೆಯುತ್ತಿದೆ. ಆದರೆ ನಮ್ಮ ದೇಶದಲ್ಲಿ ಘನತ್ಯಾಜ್ಯಗಳು ಪ್ರತಿವರ್ಷ ಹೆಚ್ಚುತ್ತಿದ್ದು, ಘನತ್ಯಾಜ್ಯ ಅಥವಾ ಪ್ಲಾಸ್ಟಿಕ್ ಬಳಕೆ ಕುರಿತು ನಾವೆಲ್ಲರೂ ಈಗಿನಿಂದಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ಪರಿಸರ ಕಾಳಜಿ ನಮ್ಮ ಮನೆಯಿಂದಲೇ ಆರಂಭವಾಗಬೇಕು, ಆದರೆ ಹಾಗೆ ಆಗುತ್ತದೆಯೇ? ಅನಗತ್ಯವಾಗಿ ಬಿಟ್ಟು ನೀರನ್ನು ಪೋಲು ಮಾಡುವುದು, ಕಾರು ಮತ್ತು ವಾಹನ ತೊಳೆಯಲು ಯಥೇಚ್ಛವಾಗಿ ನೀರು ಬಳಸಿ ರಸ್ತೆಯವರೆಗೆ ನೀರು ಹರಿದು ಹೋಗುವಂತೆ ಮಾಡುವುದು. ವಿದ್ಯುತ್ ಪೋಲು, ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಪೋಲು ಮಾಡುವುದು, ಪ್ರವಾಸಿ ತಾಣಗಳಲ್ಲಿ ತಿಂದುಂಡ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಬಿಸಾಡುವುದು, ಕಂಡಕಂಡಲ್ಲಿ ಕಸಕಡ್ಡಿಗಳನ್ನು ಚೆಲ್ಲುವುದು, ಅವುಗಳಿಗೆ ಬೆಂಕಿ ಹೆಚ್ಚಿ ಸುಡುವುದು, ಸುಮುದ್ರದ ನೀರನ್ನು ಕಲುಷಿತಗೊಳಿಸುವುದು ಹೀಗೆ ಪರಿಸರ ಸಮತೋಲನ ಹಾಳು ಮಾಡುವ ಕೆಲಸ ಯಥೇಚ್ಛವಾಗಿ ನಡೆಯುತ್ತಲೇ ಬಂದಿದೆ.
ಪ್ಲಾಸ್ಟಿಕ್ ಅತಿಯಾದ ಬಳಕೆ ನಮ್ಮ ಪ್ರಾಣಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದನ್ನು ಅನೇಕ ಸಂಶೋಧನೆಗಳು ಹೇಳುತ್ತವೆ. ಪ್ಲಾಸ್ಟಿಕ್ ಕೇವಲ ಪರಿಸರಕ್ಕಷ್ಟೇ ಅಲ್ಲ ಮನುಷ್ಯರಿಗೆ, ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಸೃಷ್ಟಿಸುತ್ತದೆ. ಇತ್ತೀಚೆಗಂತೂ ನಾವು ತಿನ್ನುವ ಆಹಾರವು ಕೂಡ ಕಲಬೆರಕೆಯಾಗಿ ಪ್ಲಾಸ್ಟಿಕ್’ನಿಂದ ತಯಾರು ಮಾಡಲಾಗುತ್ತಿದೆ ಎಂಬ ಅಘಾತಕಾರಿ ಮಾಹಿತಿ ಬಹಿರಂಗವಾಗಿತ್ತು.
ತ್ಯಾಜ್ಯ ನಿರ್ವಹಣೆ ಪ್ರಮುಖ ಉದ್ದೇಶವೇ ಕಸ ಹಾಗೂ ನಿರುಪಯುಕ್ತ ವಸ್ತುಗಳನ್ನು ಅದಷ್ಟು ಕಡಿಮೆ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವುದು ಉತ್ತಮ ವಿಧಾನ. ಇದನ್ನು ತ್ಯಾಜ್ಯ ಬೀಳದಂತೆ ಎಚ್ಚರಿಕೆ ವಹಿಸುವ ಮೂಲಕವೂ ನಿಯಂತ್ರಿಸಬಹುದಾಗಿದೆ. ತ್ಯಾಜ್ಯ ಪ್ರಮಾಣ ಕಡಿಮೆ ಮಾಡಲು ಹಳೆ ವಸ್ತುಗಳ ಮರುಬಳಕೆ ಉಪಯುಕ್ತ. ತ್ಯಾಜ್ಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಹಾನಗರ ಪಾಲಿಕೆಯು ತ್ಯಾಜ್ಯ ಬೇರ್ಪಡಿಸಿ ವಿಲೇವಾರಿ ಮಾಡುವ ಯೋಜನೆಯನ್ನು ಜಾರಿಗೆ ತಂದಿದೆ.
ಟನ್’ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನದಿಗಳಿಗೆ ಹಾಗೂ ಸಮುದ್ರಕ್ಕೆ ಸುರಿಯುತ್ತಿರುವುದರಿಂದ ಬಹಳ ದೊಡ್ಡ ಮಟ್ಟದಲ್ಲಿ ಅಪಾಯ ಉಂಟಾಗುತ್ತದೆ. ನೀರಿನೊಂದಿಗೆ ಬೆರೆತುಕೊಂಡು ಸಮುದ್ರ ಜೀವಿಗಳು ಅದನ್ನು ಆಹಾರವಾಗಿ ಸೇವಿಸಿ ತೊಂದರೆಗೆ ಸಿಲುಕುತ್ತಿರುವುದು ಒಂದೆಡೆಯಾದರೆ, ಮೀನು ಮತ್ತಿತರ ಕಡಲಿನ ಆಹಾರಗಳು ತಿನ್ನುವ ಜೀವಿಗಳಿಗೆ ಅಪಾಯ ತಂದೊಡ್ಡುತ್ತದೆ. ಹೀಗೆ ವಿಷಯುಕ್ತ ಕಡಲ ಜೀವಿಗಳನ್ನು ತಿಂದು ಬದುಕುವ ಮಾನವ ಹಾಗೂ ಇನ್ನಿತರ ಪ್ರಾಣಿ-ಪಕ್ಷಿಗಳು ಸಂಕಷ್ಟಕ್ಕೆ ಗುರಿಯಾಗಿ ಇಡಿ ಆಹಾರ ಸರಪಣಿ ವಿಷಯುಕ್ತವಾಗುತ್ತದೆ.
ಸಮುದ್ರ ಹಕ್ಕಿಗಳು, ಒಂದು ಲಕ್ಷಕ್ಕೂ ಅಧಿಕ ಹಾಗೂ ಇನ್ನಿತರ ಸಮುದ್ರ ಜೀವಿಗಳು ಪ್ಲಾಸ್ಟಿಕ್’ಗಳು ವಿಷಕಾರಕ ಅಂಶಗಳಿಂದ ಸಾಯುತ್ತಿವೆ ಎಂದು ಅಧ್ಯಯನಗಳು ಹೇಳುತ್ತಿವೆ. ಜೊತೆಗೆ ಎಲ್ಲೆಂದರಲ್ಲಿ ಬಿಸಾಡುವ ಪ್ಲಾಸ್ಟಿಕ್’ಗಳನ್ನು ತಿನ್ನುವ ಪಶು, ಪಕ್ಷಿಗಳು ಕೂಡ ಅಪಾಯಕ್ಕೆ ಸಿಲುಕುತ್ತವೆ. ಇವುಗಳ ಬಗ್ಗೆ ಸಚಿತ್ರ ವರದಿಗಳನ್ನೆಲ್ಲಾ ಪತ್ರಿಕೆಗಳಲ್ಲಿ ಓದಿದ್ದೇವೆ, ಕಣ್ಣೆದುರಿಗೆ ನೋಡುತ್ತಿದ್ದೇವೆ. ಹಾಗಿದ್ದೂ ಕೂಡ ನಾವು ಪ್ಲಾಸ್ಟಿಕ್ ಬಳಕೆಯನ್ನು ತಡೆಯುವಲ್ಲಿ ವಿಫಲರಾಗಿದ್ದೇವೆ.
ಇಷ್ಟೇ ಅಲ್ಲದೇ ಪ್ಲಾಸ್ಟಿಕನ್ನು ಹಾಗೆಯೇ ಬಿಸಾಡಿದರೆ ಮಣ್ಣಿನಲ್ಲಿ ಕರಗುವುದಿಲ್ಲ. ಪ್ರತಿದಿನವೂ ನಮ್ಮ ಸುತ್ತ ಪ್ಲಾಸ್ಟಿಕ್ ಬ್ಯಾಗ್’ಗಳು, ಬಾಟಲ್, ಆಹಾರ ಕಂಟೈನರ್, ಕಾಫಿ/ಟೀ ಕಪ್ಪುಗಳು, ಪ್ಲಾಸ್ಟಿಕ್’ನಲ್ಲಿ ಸುತ್ತಿಕೊಡುವ ಆಹಾರ ಪದಾರ್ಥಗಳು ಇತ್ಯಾದಿ ಪ್ಲಾಸ್ಟಿಕ್ ಉತ್ವನ್ನಗಳು ನಾವು ಬಳಸಿ ಅವುಗಳನ್ನು ಯಾವುದೇ ಮುನ್ನೆಚ್ಚರಿಕೆ ವಹಿಸದೇ ಕಂಡ ಕಂಡಲ್ಲಿ ಬಿಸಾಕುತ್ತೇವೆ.
ಮಾನವನು ಬಳಸಿದ ವಸ್ತುಗಳ ಉಳಿದ ಭಾಗವನ್ನು ತ್ಯಾಜ್ಯದ ಉಗಮ ಎಂದು ಹೇಳಬಹುದು. ಈ ವ್ಯರ್ಥ ವಸ್ತುಗಳು ಮನುಷ್ಯನ ಆರೋಗ್ಯ ಮತ್ತು ಪರಿಸರದ ಸೌಂದರ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇದರ ಜೊತೆಯಲ್ಲಿ ಕಸವು ಅಲಂಕಾರಿಕ ವಸ್ತುಗಳನ್ನು ತಯಾರಿಸಲು ಕೂಡಾ ಸಂಪನ್ಮೂಲವಾಗಿ ಬಹುಮುಖ್ಯ ಪಾತ್ರ ನಿರ್ವಹಿಸುವುದು.
ಒಟ್ಟಾರೆ ನಮ್ಮ ಸತ್ತಲೂ ಪ್ರತಿದಿನ ಉತ್ಪತ್ತಿಯಾಗುವ ಲಕ್ಷ ಲಕ್ಷ ಟನ್’ಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಸಾರ್ವಜನಿಕರಲ್ಲಿ ಒಣಕಸ, ಹಸಿಕಸ, ಬೇಡವಾದ ಕಸವೆಂದು 3 ರೀತಿಯಲ್ಲಿ ವಿಂಗಡಣೆ ಮಾಡಿ ಮಹಾನಗರ ಪಾಲಿಕೆಯ ವಾಹನಕ್ಕೆ ನೀಡುವಂತೆ ಸೂಚಿಸಿದೆ.
ಪರಿಸರ ದಿನಾಚರಣೆಯನ್ನು ಕೇವಲ ಆಚರಣೆಗಷ್ಟೇ ಸೀಮಿತಗೂಳಿಸದೆ, ನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪ್ರಜ್ಞಾಪೂರ್ವವಾಗಿ ದೂರವಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂಬುವುದು ಮಹಾನಗರ ಪಾಲಿಕೆಯ ಮುಖ್ಯ ಉದ್ದೇಶವಾಗಿದೆ.
ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಹತ್ವ ನೀಡಬೇಕು. ಹಿಂದೆಲ್ಲಾ ಆಹಾರವೇ ಔಷಧವಾಗಿರುತ್ತಿತ್ತು. ಇಂದು ಆಹಾರವೇ ವಿಷವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡುವುದು ಕಷ್ಟ ಹೀಗಾಗಿ ಮುನ್ನೆಚ್ಚರಿಕೆಯಾಗಿ ಪ್ರತಿಯೊಬ್ಬರು ಪ್ಲಾಸ್ಟಿಕ್ ನಿಯಂತ್ರಣದಿಂದ ಮುಕ್ತಿ ಹೊಂದಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಂತೆ ಮಾಡುವುದೂ ನಮ್ಮೆಲ್ಲರ ಹೊಣೆಯಾಗಿರುತ್ತದೆ.
Get in Touch With Us info@kalpa.news Whatsapp: 9481252093
Discussion about this post