ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಜಿಲ್ಲೆಯ ಅಣ್ಣಿಗೇರಿ ಠಾಣೆ ಎದುರು ನಿಲ್ಲಿಸಿದ್ದ ಪೊಲೀಸ್ ವಾಹನವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಅಂಬಿಕಾ ನಗರ ನಿವಾಸಿ ನಾಗಪ್ಪ ಹಡಪದ ಪೊಲೀಸ್ ವಾಹನ ಕಳ್ಳತನ ಮಾಡಿರುವ ವ್ಯಕ್ತಿಯಾಗಿದ್ದು, ಕದ್ದ ವಾಹನದಲ್ಲಿ ಬ್ಯಾಡಗಿವರೆಗೂ ಹೋಗಿದ್ದ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಹೊತ್ತಿನಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ನಿತ್ಯ ಬೆಳಗ್ಗೆ ರೌಂಡ್ಸ್‌ಗೆ ಬಳಸುತ್ತಿದ್ದ ಬೊಲೆರೋ ವಾಹನವದ ಕೀಯನ್ನು ಸಿಬ್ಬಂದಿಗಳು ಅಲ್ಲಿಯೇ ಬಿಟ್ಟಿದರು. ಇದನ್ನು ಗಮನಿಸಿದ ಆರೋಪಿಯನ್ನು ವಾಹನ ಕಳ್ಳತನ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post