ಕಲ್ಪ ಮೀಡಿಯಾ ಹೌಸ್ | ಧರ್ಮಸ್ಥಳ |
ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನವೆಂಬರ್ 4ರಿಂದ ರಂಗಪೂಜೆ, ಬೆಳ್ಳಿ ರಥೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿಶೇಷಪೂಜೆ, ಉತ್ಸವಾದಿ ಸೇವೆಗಳು ಆರಂಭವಾಗಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ವಿಶೇಷ ಪೂಜೆ, ಉತ್ಸವಾದಿ ಸೇವೆಗಳು ನಡೆಯುವ ಕಾರಣ ದೇವರ ದರ್ಶನಕ್ಕೆ ಸಮಯಾವಕಾಶ ಹೊಂದಿಸಲಾಗಿದ್ದು, ಬೆಳಗ್ಗೆ 6ರಿಂದ ಅಪರಾಹ್ನ 2.30, ಸಂಜೆ 5ರಿಂದ ರಾತ್ರಿ 8.30ರ ವರೆಗೆ (ವಿಶೇಷ ದಿನಗಳಲ್ಲಿ ಸಮಯ ವ್ಯತ್ಯಾಸವಾಗುವ ಸಾಧ್ಯತೆಯಿದೆ). ಅನ್ನಪೂರ್ಣ ಛತ್ರದಲ್ಲಿ ಬೆಳಗ್ಗೆ 10.30ರಿಂದ 3 ಹಾಗೂ ರಾತ್ರಿ 7ರಿಂದ 9ರವರೆಗೆ ಭಕ್ತರಿಗೆ ಊಟದ ವ್ಯವಸ್ಥೆ ಇರಲಿದೆ.
ಬೀಡಿನಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೆಳಗ್ಗೆ 9ರಿಂದ 12, ಸಂಜೆ 4ರಿಂದ 5 ಹಾಗೂ ರಾತ್ರಿ 7ರಿಂದ 9ರವರೆಗೆ ಭೇಟಿ ಮಾಡಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post