ಕಲ್ಪ ಮೀಡಿಯಾ ಹೌಸ್ | ಧಾರವಾಡ |
ರಾಷ್ಟ್ರೀಯ ಬೃಹತ ಲೋಕ ಅದಾಲತ್ ನಿಮಿತ್ತ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಲೋಕ್ ಅದಾಲತ್ ನಡೆಸಲಾಯಿತು.
ಅದರಲ್ಲಿ 9 ದೂರು ಪ್ರಕರಣಗಳು ಮತ್ತು 5 ಕಾರ್ಯಾತ್ಮಕ ಪ್ರಕರಣಗಳನ್ನು ಸಂಧಾನದ ಮೂಲಕ ರಾಜಿ ಮಾಡಿಸಲಾಯಿತು. ಈ ಎಲ್ಲ ಪ್ರಕರಣಗಳಲ್ಲಿ ಒಟ್ಟು 1 ಕೋಟಿ 50 ಲಕ್ಷ ರೂಪಾಯಿಗಳ ಪರಿಹಾರ ನಿಗದಿಪಡಿಸಿ ಇತ್ಯರ್ಥಗೊಳಿಸಲಾಯಿತು. ಇಂದು ನಡೆದ ಲೋಕ್ ಅದಾಲತನ ನೇತೃತ್ವವನ್ನು ಆಯೋಗದ ಅಧ್ಯಕ್ಷ ಈಶಪ್ಪ ಕ.ಭೂತೆ ಅವರು ಮತ್ತು ಹಿರಿಯ ಮಹಿಳಾ ನ್ಯಾಯವಾದಿ ಪುಷ್ಪಾ ಪಾಟೀಲ ಅವರು ವಹಿಸಿದ್ದರು.
Also read: ಗಮನಿಸಿ! ಆರೋಗ್ಯ ಭಾಗ್ಯ ಯೋಜನೆಗೆ ಶಿವಮೊಗ್ಗದ ಮ್ಯಾಕ್ಸ್, ಮೈಸೂರಿನ ಅಗರ್ವಾಲ್ ಆಸ್ಪತ್ರೆ ಸೇರ್ಪಡೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post